ಕಾಸರಗೋಡು: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಪೀಠಾರೋಹಣದ ತೃತೀಯ ವರ್ಷಾಚರಣೆ ಕಾರ್ಯಕ್ರಮ ಅ. 26ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಶ್ರೀ ಮಠದಲ್ಲಿ ಜರುಗಲಿದೆ. ಬೆಳಗ್ಗೆ 9.30ಕ್ಕೆ ಭಜನಾ ಸಂಕೀರ್ತನ ಮಂಗಳೂರು ವತಿಯಿಂದ ಭಜನಾ ಸತ್ಸಂಗ, ಮಧ್ಯಾಹ್ನ 2.30ರಿಂದ ಕರ್ನಾಟಕ ಕಲಾಶ್ರೀ, ವಿದುಷಿ ರಾಜಶ್ರೀ ಉಳ್ಳಾಲ್ ಅವರ ಶಿಷ್ಯರಿಂದ ನೃತ್ಯ ನಮನ ನಡೆಯುವುದು.
3.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಾಹಿತಿ, ಖ್ಯಾತ ಶಿಕ್ಷಣ ತಜ್ಞ ಕೆ.ಇ ರಾಧಾಕೃಷ್ಣ ಅಧ್ಯಕ್ಷತೆ ವಹಿಸುವರು. ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಗೌರವ ಉಪಸ್ಥಿತರಿರುವರು. ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಪುತ್ತೂರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭ ಹಿರಿಯ ನೃತ್ಯಗುರು ಮೋಹನ್ ಕುಮಾರ್ ಉಳ್ಳಾಲ್ ಅವರನ್ನು ಗೌರವಿಸಲಾಗುವುದು. ಖ್ಯಾತ ಯಕ್ಷಗಾನ ಕಲಾವಿದ ಪ್ರೊ. ಎಂ.ಎಲ್ ಸಾಮಗ ಅಭಿನಂದನಾ ಭಾಷಣ ಮಾಡುವರು. ಈ ಸಂದರ್ಭ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶಿಷ್ಯವೃಂದ ಮಾನ್ಯ ಇವರ ವತಿಯಿಂದ ಡಾ. ಟಿ. ಶ್ಯಾಮ ಭಟ್ ಅವರಿಗೆ ಗೌರವಾರ್ಪಣೆ ನಡೆಯುವುದು. ಸಂಜೆ 6ರಿಂದ 'ಗದಾ ಯುದ್ಧ'ಯಕ್ಷಗಾನ ಬಯಲಾಟ ನಡೆಯುವುದು.