ಕಾಸರಗೋಡು: ಉನ್ನತ ಶಿಕ್ಷಣ ಇಲಾಖೆಯಡಿ ಅಸಾಪ್ ಕೇರಳದ ಆಶ್ರಯದಲ್ಲಿ 50 ವರ್ಷ ಮೇಲ್ಪಟ್ಟವರಿಗಾಗಿ ಡಿಜಿಟಲ್ ಸಾಕ್ಷರತಾ ಕಾರ್ಯಾಗಾರವನ್ನು ಅಕ್ಟೋಬರ್ 27 ಮತ್ತು 28 ರಂದು ಕಾಸರಗೋಡು ವಿದ್ಯಾನಗರದ ಅಸಾಪ್ ಕಮ್ಯುನಿಟಿ ಸ್ಕಿಲ್ ಪಾರ್ಕ್ ನಲ್ಲಿ ಆಯೋಜಿಸಲಾಗಿದೆ.
ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳನ್ನು ಉಪಯೋಗಿಸಲು ಮತ್ತು ಡಿಜಿಟಲ್ ರಂಗದ ಮೋಸಗಳನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡುವುದು ಮುಂತಾದವುಗಳು ಇದರ ಗುರಿಯಾಗಿದೆ. ವಿವಿಧ ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳು, ಮೊಬೈಲ್ ಅಪ್ಲಿಕೇಶನ್‍ಗಳು, ಆನ್‍ಲೈನ್ ವೆಬ್‍ಸೈಟ್‍ಗಳು ಮತ್ತು ಇತರೆ ಆನ್‍ಲೈನ್ ಸೇವೆಗಳನ್ನು ಉಪಯೋಗಿಸಲು ಹಿರಿಯ ನಾಗರಿಕರಿಗೆ ಅಗತ್ಯ ತರಬೇತಿ ನೀಡಲಾಗುವುದು. ತಾಂತ್ರಿಕ ತಜ್ಞರು ತರಗತಿ ತೆಗೆದುಕೊಳ್ಳಲಿದ್ದಾರೆ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 8848655022, 9995633793, 7736221309 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.