ಕಾಸರಗೋಡು : ಜಿಲ್ಲಾ ಎಂಪೆÇ್ಲೀಯಿಮೆಂಟ್ ಮತ್ತು ಎಂಪೆÇ್ಲೀಯಬಿಲಿಟಿ ಸೆಂಟರ್‍ನ ಆಶ್ರಯದಲ್ಲಿ 'ದೀಪ್ತಂ 2023' ಉಚಿತ ಉದ್ಯೋಗ ಮೇಳ ಅಕ್ಟೋಬರ್ 28 ರಂದು ಬೆಳಿಗ್ಗೆ 9.30 ಕ್ಕೆ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ಉದ್ಯೋಗ ಮೇಳವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸುವರು. ಕಾಸರಗೋಡು ನಗರಸಭಾ ಅಧ್ಯಕ್ಷ ವಿ.ಎಂ.ಮುನೀರ್ ಅಧ್ಯಕ್ಷತೆ ವಹಿಸುವರು. 35 ಕ್ಕೂ ಹೆಚ್ಚು ಉದ್ಯೋಗದಾತರು ಭಾಗವಹಿಸುವ ಮೇಳದಲ್ಲಿ 2,000 ಕ್ಕೂ ಹೆಚ್ಚು ಹುದ್ದೆಗಳನ್ನು ವರದಿ ಮಾಡಲಾಗಿದೆ. ಎಲ್.ಐ.ಸಿ, ಎಚ್.ಡಿ.ಎಫ್.ಸಿ ಲೈಫ್, ಆದಿತ್ಯ ಬಿರ್ಲಾ, ಕಲ್ಯಾಣ್ ಸಿಲ್ಕ್ಸ್, ರಿಲಯನ್ಸ್ ಮತ್ತು ನಿಪೆÇ್ಪೀನ್‍ನಂತಹ ಪ್ರಮುಖ ಬ್ರಾಂಡ್‍ಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ.
ಆಸಕ್ತ ಅಭ್ಯರ್ಥಿಗಳು ಅಂದು ಬೆಳಿಗ್ಗೆ 9ಕ್ಕೆ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಹತೆ ಸಾಬೀತುಪಡಿಸುವ ಸರ್ಟಿಫಿಕೇಟ್ ಮತ್ತು ಅದರ ನಕಲು, ಬಯೋಡಾಟಾ (ಕನಿಷ್ಠ 3 ನಕಲು) ಮುಂತಾದವುಗಳೊಂದಿಗೆ ಸ್ಪೋಟ್ ರಿಜಿಸ್ಟ್ರೇಷನ್ ನಡೆಸಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಎಂಪೆÇ್ಲೀಯಬಿಲಿಟಿ ಸೆಂಟರ್ ಕಾಸರಗೋಡು ದೂರವಾಣಿ ಸಂಖ್ಯೆ 04994-255582, 9207155700 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.