ಕುಂಬಳೆ: ಬಾಡೂರು ಸನಿಹದ ಪೆರ್ಮುದೆ ಕಂಬಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳ ಹಿನ್ನೆಲೆಯಲ್ಲಿ ಅನುಜ್ಞಾ ಕಲಶ, ಜಟಧಾರಿ, ಶಾಸ್ತಾರ, ಗಣಪತಿ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠೆ ನ. 2ರಂದು ಬೆಳಗ್ಗೆ 7.30ರಿಂದ ನಡೆಯಲಿದೆ.
ದೇವಸ್ಥಾನದ ತಂತ್ರಿವರ್ಯ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಹಾಗೂ ಶಿಲ್ಪಿ ಕೃಷ್ಣಪ್ರಸಾದ ಮುನಿಯಂಗಳ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿರುವುದು. ಜೀರ್ಣೋದ್ಧಾರ ಪ್ರಕ್ರಿಯೆ ಆರಂಭಿಸುವ ಬಗ್ಗೆ ಕುಡಾಲು ಮತ್ತು ಬಾಡೂರು ಗ್ರಾಮಗಳ ಸಮಸ್ತ ಭಗವದ್ಭಕ್ತಾದಿಗಳ ಪರವಾಗಿ ಸಾಮೂಹಿಕ ಪ್ರಾರ್ಥನೆ ಅ. 29ರಂದು ಮಧ್ಯಾಹ್ನ ಮಹಾಪೂಜೆಯ ಸಂದರ್ಭ ದೇವಸ್ಥಾನದಲ್ಲಿ ಜರುಗಲಿರುವುದು. ಬಾಲಾಲಯ ಪ್ರತಿಷ್ಠೆ ನಂತರ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ತನಕ ದೇವಸ್ಥಾನದಲ್ಲಿ ದಿನಂಪ್ರತಿ ನಡೆಯುವ ಬೆಳಗ್ಗಿನ ಪೂಜೆ ಬೆಳಗ್ಗೆ 7.30, ಮಧ್ಯಾಹ್ನದ ಪೂಜೆ 8.30 ಹಾಗೂ ರಾತ್ರಿ ಪೂಜೆ ಸಂಜೆ 7.30ಕ್ಕೆ ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.