ಪಾಲಕ್ಕಾಡ್: ಪಾಲಕ್ಕಾಡ್ ರೈಲ್ವೆ ವಿಭಾಗವು ಆದಾಯದಲ್ಲಿ ಏರಿಕೆ ಕಂಡಿದೆ. ಟಿಕೆಟ್ ಆದಾಯದ ಮೂಲಕ 467.67 ಕೋಟಿ ರೂ.ನಿವ್ವಳ ಲಾಭಗಳಿಸಿದೆ.
4.27ರಷ್ಟು ಏರಿಕೆ ದಾಖಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.29.78ರಷ್ಟು ಹೆಚ್ಚಳವಾಗಿದೆ. ಸರಕು ಮತ್ತು ಟಿಕೆಟ್ ತಪಾಸಣೆ ಸೇರಿದಂತೆ 33.68 ಕೋಟಿ ರೂ. ಲಭಿಸಿದೆ. ಇತರೆ ಮೂಲಗಳಿಂದ 29.81 ಕೋಟಿ ರೂ.ಲಭಿಸಿದೆ.
ಶೋರ್ನೂರ್, ಮಂಗಳೂರು, ಕಣ್ಣೂರು ಪಾಲಕ್ಕಾಡ್ ಜಂಕ್ಷನ್, ಪಾಲಕ್ಕಾಡ್ ಟೌನ್, ಅಂಗಡಿಪುರಂ, ಒಟ್ಟಪಾಲಂ, ಕುಟ್ಟಿಪುರಂ, ಕೋಝಿಕ್ಕೋಡ್, ಕಣ್ಣೂರು, ಪಯ್ಯನ್ನೂರ್, ಕುಂಬಳೆ, ಕೊಟ್ಟಿಕುಳಂ, ನೀಲೇಶ್ವರ, ಪಳೆಯಂಗಡಿ, ಪರಪ್ಪನಂಗಡಿ, ಪಯ್ಯೋಳಿಯಲ್ಲಿ ಹೊಸ ಅಡುಗೆ ಘಟಕಗಳು, ತಲಶ್ಶೇರಿ, ಮಾಹಿ, ವಲಪಟ್ಟಣಂ, ಫೆರೂಕ್, ತಿರೂರ್ ಮತ್ತು ಮಂಗಳೂರು ನಿಲ್ದಾಣಗಳಲ್ಲಿ ಹೆಚ್ಚಿನ ಪಾರ್ಕಿಂಗ್ ಸೌಲಭ್ಯಗಳನ್ನು ಪರಿಚಯಿಸಲಾಗಿದೆ. ಕೋಝಿಕ್ಕೋಡ್‍ನಲ್ಲಿ ಒಂದು ಎಸಿ ಹಾಲ್, ಪಾಲಕ್ಕಾಡ್‍ನಲ್ಲಿ ಎರಡು, ತಿರೂರ್‍ನಲ್ಲಿ ತಲಾ ಒಂದು ಎಸಿ ಹಾಲ್‍ಗಳನ್ನು ಹೊಂದಿದ್ದು, ಮಂಗಳೂರು ಸೆಂಟ್ರಲ್, ಕಣ್ಣೂರು, ಕೋಝಿಕೋಡ್, ಶೋರ್ನೂರ್ ಮತ್ತು ಪಾಲಕ್ಕಾಡ್‍ನಲ್ಲಿ ಹೊಸ ಕ್ಲಾಕ್ ರೂಮ್‍ಗಳನ್ನು ಸ್ಥಾಪಿಸಲಾಗಿದೆ. ನಿಲಂಬೂರ್ ನಿಲ್ದಾಣದಲ್ಲಿ 12 ಕೋಚ್‍ಗಳಿಗೆ ಸ್ಥಳಾವಕಾಶ ಕಲ್ಪಿಸಲು ಪ್ಲಾಟ್‍ಫಾರ್ಮ್‍ನ ಉದ್ದವನ್ನು ಹೆಚ್ಚಿಸಲಾಗಿದೆ.
ವಾಳಯಾರ್ ನಿಂದ ಮಲಬಾರ್ ಸಿಮೆಂಟ್ ರಫ್ತು ಮೂಲಕ 6.4 ಲಕ್ಷ ರೂಪಾಯಿ ಆದಾಯ ಬಂದಿದೆ. 1933 ಟನ್ ಸಿಮೆಂಟ್ ರಫ್ತು ಮಾಡಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ 32.63 ಟನ್ ಸಿಮೆಂಟ್ ರಫ್ತು ಮಾಡಿದ್ದು ದಾಖಲೆಯ ಸಾಧನೆಯಾಗಿದೆ. ಗುರಿಗಿಂತ 14,000 ಟನ್ ಸಿಮೆಂಟ್ ರಫ್ತು ಮಾಡಲಾಗಿದೆ. ಈ ಮೂಲಕ 1.10 ಕೋಟಿ ರೂ.ಆದಾಯ ಲಭಿಸಿದೆ.