ಜೈಪುರ: ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ ಶನಿವಾರ ಇನ್ನೂ 83 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಜಲ್ರಾಪಟನ್ ಕ್ಷೇತ್ರದಿಂದ ಕಣಕ್ಕಿಳಿಸಿದೆ.
ಮೊದಲ ಪಟ್ಟಿಯಲ್ಲಿ ಮಾಜಿ ಉಪ ರಾಷ್ಟ್ರತಿ ಭೈರೋನ್ ಸಿಂಗ್ ಶೇಖಾವತ್ ಅವರ ಅಳಿಯ, ಐದು ಬಾರಿ ಶಾಸಕರಾಗಿರುವ ನರ್ಪತ್ ಸಿಂಗ್ ರಾಜ್ವಿ ಅವರಿಗೆ ವಿಧ್ಯಾಧರ್ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ನಿರಾಕರಿಸಲಾಗಿತ್ತು. ಇದಕ್ಕೆ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾದ ನಂತರ ಎರಡನೇ ಪಟ್ಟಿಯಲ್ಲಿ ರಾಜ್ವಿ ಅವರನ್ನು ಚಿತ್ತೋರಗಢದಿಂದ ಕಣಕ್ಕಿಳಿಸಲಾಗಿದೆ.