ಕಾಬೂಲ್: ಶನಿವಾರ ಅರ್ಧ ಗಂಟೆಯೊಳಗೆ ಅಫ್ಘಾನಿಸ್ತಾನದ ಪಶ್ಚಿಮ ಭಾಗದಲ್ಲಿ ಮೂರು ಪ್ರಬಲ ಭೂಕಂಪಗಳು ಸಂಭವಿಸಿವೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
ಕಾಬೂಲ್: ಶನಿವಾರ ಅರ್ಧ ಗಂಟೆಯೊಳಗೆ ಅಫ್ಘಾನಿಸ್ತಾನದ ಪಶ್ಚಿಮ ಭಾಗದಲ್ಲಿ ಮೂರು ಪ್ರಬಲ ಭೂಕಂಪಗಳು ಸಂಭವಿಸಿವೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
ರಿಕ್ಟರ್ ಮಾಪನದಲ್ಲಿ 6.1 ತೀವ್ರತೆಯ ಭೂಕಂಪ ಮಧ್ಯಾಹ್ನ 12:11ಕ್ಕೆ ಸಂಭವಿಸಿತು. ಬಳಿಕ 12:19ಕ್ಕೆ 5.6 ತೀವ್ರತೆ, 12:42ಕ್ಕೆ 6.2ರ ತೀವ್ರತೆಯ ಭೂಕಂಪ ಸಂಭವಿಸಿದೆ.
ಮಂಗಳವಾರ ನೇಪಾಳದಲ್ಲಿ ನಾಲ್ಕು ಪ್ರಬಲ ಭೂಕಂಪಗಳು ಸಂಭವಿಸಿದ್ದವು. ದೆಹಲಿ ಹಾಗೂ ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಇದರ ಅನುಭವವಾಗಿತ್ತು. ಭೂಕಂಪದ ಕೇಂದ್ರಬಿಂದು ಪಶ್ಚಿಮ ನೇಪಾಳದ ದಿಪಯಲ್ ಜಿಲ್ಲೆಯಲ್ಲಿತ್ತು. ಇದು ಉತ್ತರಾಖಂಡದ ಜೋಶಿಮಠದ ಆಗ್ನೇಯಕ್ಕೆ 206 ಕಿ.ಮೀ ಮತ್ತು ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಉತ್ತರಕ್ಕೆ 284 ಕಿ.ಮೀ ದೂರದಲ್ಲಿದೆ.
ಸೆಪ್ಟೆಂಬರ್ 4ರಂದು, ಅಫ್ಘಾನಿಸ್ತಾನದ ಫೈಜಾಬಾದ್‌ನಲ್ಲಿ ರಿಕ್ಟರ್ ಮಾಪನದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆಗಸ್ಟ್ 28 ರಂದು 4.8 ತೀವ್ರತೆಯ ಭೂಕಂಪ ಸಂಭವಿಸಿತ್ತು.