ಕೊಚ್ಚಿ: ಕಲಮಸ್ಸೇರಿ ಬಾಂಬ್ ಸ್ಪೋಟದ ಆರೋಪಿ ಡೊಮಿನಿಕ್ ಮಾರ್ಟಿನ್ ಸ್ಫೋಟದ ಸಿದ್ಧತೆಗೆ ಕೇವಲ 3,000 ರೂ. ವೆಚ್ಚ ತಗಲಿದೆ ಎಂದು ಹೇಳಿಕೆ ನೀಡಿದ್ದಾನೆ. ಸ್ಫೋಟಕ್ಕೆ ಐಇಡಿ, ಗನ್ ಪೌಡರ್ ಮತ್ತು ಪೆಟ್ರೋಲ್ ಖರೀದಿಸಲಾಗಿತ್ತು. ಸ್ಫೋಟ ಸಂಭವಿಸಿದಾಗ ಡೊಮಿನಿಕ್ ಅವರ ಅತ್ತೆ ಕೂಡ ಕನ್ವೆನ್ಷನ್ ಸೆಂಟರ್‍ನಲ್ಲಿದ್ದರು ಎಂದು ಡೊಮಿನಿಕ್ ಪೋಲೀಸರಿಗೆ ತಿಳಿಸಿದ್ದಾರೆ. ಡೊಮಿನಿಕ್ ಕೆಲವು ವಾರಗಳ ಹಿಂದೆ ಪೆಟ್ರೋಲ್ ಮತ್ತು ಐಇಡಿಗಾಗಿ ವಸ್ತುಗಳನ್ನು ಖರೀದಿಸಿದ್ದ ಎಂದು ಪೋಲೀಸರ ಮುಂದೆ ಬಹಿರಂಗಪಡಿಸಿದ್ದಾರೆ.
ಆರೋಪಿ ಮಾರ್ಟಿನ್ ಮಾಲೀಕತ್ವದ ಫ್ಲಾಟ್‍ನಲ್ಲಿ ಭಾನುವಾರ ಸಂಜೆ ನಗರ ಪೆÇಲೀಸರು ಪರಿಶೀಲನೆ ನಡೆಸಿದರು. ಆರೋಪಿಗಳ ಬಗ್ಗೆ ಸಮೀಪದ ನಿವಾಸಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಈ ಫ್ಲ್ಯಾಟ್‍ಗೆ ಪೆÇಲೀಸ್ ಕಣಗಾವಲು ಏರ್ಪಡಿಸಲಾಗಿದೆ. ಏತನ್ಮಧ್ಯೆ, ಎನ್ಎಸ್ಜಿ ತಂಡವು ಸ್ಫೋಟ ಸಂಭವಿಸಿದ ಕನ್ವೆನ್ಷನ್ ಸೆಂಟರ್ ಅನ್ನು ಪರಿಶೀಲಿಸಿತು. ಬೆಳಗ್ಗೆ 8.30ರ ಸುಮಾರಿಗೆ ತಂಡ ಸ್ಥಳಕ್ಕೆ ತಲುಪಿತು. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸೆಕ್ರೆಟರಿಯೇಟ್‍ನಲ್ಲಿ ಸರ್ವಪಕ್ಷ ಸಭೆ ಆರಂಭವಾಗಿದೆ. ಸಭೆಯಲ್ಲಿ ಪಕ್ಷದ ವಿವಿಧ ಮುಖಂಡರು ಭಾಗವಹಿಸಿದ್ದಾರೆ.
ತಾನೊಬ್ಬನೇ ಬಾಂಬ್ ತಯಾರಿಸಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದಾರೆ. ಸ್ಫೋಟದ ನಂತರ ಕೊರಟ್ಟಿಯ ಮಿರಾಕಲ್ ರೆಸಿಡೆನ್ಸಿಗೆ ತಲುಪಿದ. ಆರೋಪಿ 10.45ರ ಸುಮಾರಿಗೆ ಕನ್ವಶ್ಶನ್ ಸೆಂಟರ್ ಗೆ ಬಂದಿದ್ದು, ಸ್ಪೋಟ ನಡೆಸಿ ಕೆಲವೇ ಗಂಟೆಗಳಲ್ಲಿ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಹಾಕಿದ್ದಾನೆÉ. ದಾಳಿಯಲ್ಲಿ ಇದುವರೆಗೆ ಮೂವರು ಸಾವನ್ನಪ್ಪಿದ್ದಾರೆ. ಇನ್ನೂ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಮೃತ ಲಿಬಿನಾ ಅವರ ತಾಯಿ ಮತ್ತು ಸಹೋದರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.