HEALTH TIPS

ಕಾಸರಗೋಡಿನ ಮಾಜಿ ಜಿಲ್ಲಾಧಿಕಾರಿ ಡಾ. ರಾಜು ನಾರಾಯಣ ಸ್ವಾಮಿ ಅವರ 32ನೇ ಪುಸ್ತಕ ಬಿಡುಗಡೆ: 'ಸೈಬರ್ ಕಾನೂನು' ಕೃತಿ ಪ್ರಕಟಿಸಿದ ಇ. ಶ್ರೀಧರನ್

                   ತ್ರಿಶೂರ್: ಕೇರಳ ಕೇಡರ್ ಐಎಎಸ್ ಅಧಿಕಾರಿ ಡಾ. ರಾಜು ನಾರಾಯಣ ಸ್ವಾಮಿ ಅವರು ಬರೆದಿರುವ 32ನೇ ಕೃತಿಯನನು ನಿನ್ನೆ ಮೆಟ್ರೋಮ್ಯಾನ್ ಇ. ಶ್ರೀಧರನ್ ಬಿಡುಗಡೆ ಮಾಡಿದರು. ಆರಂಭಿಕರಿಕ ಐಐಒ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತೆ ಪುಸ್ತಕವನ್ನು ವಿನ್ಯಾಸಗೊಳಿಸಲಾಗಿದೆ. ಇದು ಸ್ವಾಮಿಯವರ ಮೂವತ್ತೆರಡನೆಯ ಪುಸ್ತಕ.

                  ಸ್ವಾಮಿಯವರ ಹಿಂದಿನ ಪುಸ್ತಕಗಳಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ 'ಶಾಂತಿಮಂತ್ರಂ ಮುಝಂಗುನ್ನ ಧಿವ್ವರೈಲ್' ಮತ್ತು ಕುಂಜುನ್ನಿ ಪ್ರಶಸ್ತಿ ವಿಜೇತ 'ನೀಲಕುರಿಂಜಿ: ಒರು ವ್ಯಾಝವಟ್ಟಮಿಲೆ ವಸಂತಂ' ಸೇರಿವೆ.

                   ಕಲೆಕ್ಟರ್, ಕಾಲೇಜು ಶಿಕ್ಷಣ ನಿರ್ದೇಶಕ, ಮಾರ್ಕೆಟ್ ಫೆಡ್ ನ ಎಂಡಿ, ಕೃಷಿ ಉತ್ಪಾದನಾ ಆಯುಕ್ತ ಹಾಗೂ ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಐದು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

                     ಭ್ರμÁ್ಟಚಾರದ ವಿರುದ್ಧದ ಹೋರಾಟಕ್ಕಾಗಿ ಅವರಿಗೆ 2018 ರಲ್ಲಿ ಐಐಟಿ ಕಾನ್ಪುರದಿಂದ ಸತ್ಯೇಂದ್ರ ದುಬೆ ಸ್ಮಾರಕ ಪ್ರಶಸ್ತಿಯನ್ನು ನೀಡಲಾಯಿತು. ಅವರು ಸೈಬರ್ ಕಾನೂನಿನಲ್ಲಿ ಹೋಮಿ ಭಾಭಾ ಫೆಲೋಶಿಪ್ ಪಡೆದಿದ್ದಾರೆ.

             ಕಳೆದ ಡಿಸೆಂಬರ್‍ನಲ್ಲಿ, ಬೌದ್ಧಿಕ ಆಸ್ತಿ ಕಾನೂನಿನ ಸಂಶೋಧನೆಗಾಗಿ ಸ್ವಾಮಿ ಅವರಿಗೆ ಯುನೈಟೆಡ್ ಸ್ಟೇಟ್ಸ್‍ನ ಜಾರ್ಜ್ ಮೇಸನ್ ವಿಶ್ವವಿದ್ಯಾಲಯವು ಲಿಯೊನಾರ್ಡೊ ಡಾ ವಿನ್ಸಿ ಫೆಲೋಶಿಪ್ ನೀಡಿತು. ಸ್ವಾಮಿ ಅವರು ಕಾನೂನು ಮತ್ತು ತಂತ್ರಜ್ಞಾನದಲ್ಲಿ 200 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. 36 ಬಾರಿ ಕೇಂದ್ರ ಚುನಾವಣಾ ವೀಕ್ಷಕರಾಗಿದ್ದ ಐಎಎಸ್ ಅಧಿಕಾರಿ ಎಂಬ ಅಪರೂಪದ ದಾಖಲೆಯನ್ನೂ ಸ್ವಾಮಿ ಹೊಂದಿದ್ದಾರೆ. ದಶಕದ ಹಿಂದೆ ಕಾಸರಗೋಡು ಜಿಲ್ಲಾಧಿಕಾರಿಯಾಗಿ ಸದಾ ಜನಮಾನಸದಲ್ಲಿ ಮರೆಯದ ಸ್ಥಾನ ಪಡೆದಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries