ಕಾಸರಗೋಡು: ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 33.24ಲಕ್ಷ ರೂ. ನಗದನ್ನು ನಗರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮುಹಮ್ಮದ್ ಹಾಗೂ ಸುಲೈಮಾನ್ ಅಹಮ್ಮದ್ ಎಂಬವರನ್ನು ಬಂಧಿಸಿದ್ದಾರೆ.
ಕಾಸರಗೋಡು ಡಿವೈಎಸ್‍ಪಿ ಪಿ.ಕೆ. ಸುಧಾಕರನ್ ಅವರಿಗೆ ಲಭಿಸಿದ ಮಾಹಿತಿಯನ್ವಯ ನಗರದ ಜ್ಯುವೆಲ್ಲರಿ ಸನಿಹದಿಂದ ಇವರನ್ನು ಹವಾಲಾ ಹಣದೊಂದಿಗೆ ವಶಕ್ಕೆ ತೆಗೆದುಕೊಳ್ಳಲಾಗಿದೆ. ಹಣದ ಮೂಲಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.