ಭುವನೇಶ್ವರ: ಒಡಿಶಾದ 34 ಜನರ ಕಾರ್ಮಿಕರ ಗುಂಪೊಂದು ಲಾವೋಸ್‌ನ ಕಂಪನಿಯೊಂದರಲ್ಲಿ ಸೆರೆಯಾಳುಗಳಾಗಿದ್ದು, ತಮ್ಮನ್ನು ಮರಳಿ ಭಾರತಕ್ಕೆ ಕರೆಸಿಕೊಳ್ಳುವಂತೆ ಒಡಿಶಾ ಸರ್ಕಾರವನ್ನು ವಿನಂತಿಸಿದ್ದಾರೆ.
ಭುವನೇಶ್ವರ: ಒಡಿಶಾದ 34 ಜನರ ಕಾರ್ಮಿಕರ ಗುಂಪೊಂದು ಲಾವೋಸ್‌ನ ಕಂಪನಿಯೊಂದರಲ್ಲಿ ಸೆರೆಯಾಳುಗಳಾಗಿದ್ದು, ತಮ್ಮನ್ನು ಮರಳಿ ಭಾರತಕ್ಕೆ ಕರೆಸಿಕೊಳ್ಳುವಂತೆ ಒಡಿಶಾ ಸರ್ಕಾರವನ್ನು ವಿನಂತಿಸಿದ್ದಾರೆ.
ಲಾವೋಸ್‌ನ ಪ್ಲೈವುಡ್ ಕಂಪನಿಯೊಂದರಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಸುಮಾರು ಒಂದೂವರೆ ತಿಂಗಳ ಹಿಂದೆ ಕಂಪನಿಯು ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿದೆ.
ಕಾರ್ಮಿಕರನ್ನು ಮರಳಿ ರಾಜ್ಯಕ್ಕೆ ಕರೆತರಲು ಬೇಕಾದ ವ್ಯವಸ್ಥೆಯನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಸಮಸ್ಯೆ ಕುರಿತು ರಾಜ್ಯ ಕಾರ್ಮಿಕ ಆಯುಕ್ತರು ಲಾವೋಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಕಚೇರಿ ತಿಳಿಸಿದೆ.
ಕಾರ್ಮಿಕರನ್ನು ಸುರಕ್ಷಿತವಾಗಿ ತವರಿಗೆ ಕಳುಹಿಸಲು ಕರೆತರಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ರಾಯಭಾರ ಕಚೇರಿ ಒಡಿಶಾ ಸರ್ಕಾರಕ್ಕೆ ತಿಳಿಸಿದೆ.
'ನಮಗೆ ತಿನ್ನಲು ಆಹಾರ ಸಿಗುತ್ತಿಲ್ಲ. ನಮ್ಮ ಬಳಿ ಹಣವೂ ಇಲ್ಲ. ಭಾರತಕ್ಕೆ ಹಿಂತಿರುಗಲು ಸಹ ಬಿಡುತ್ತಿಲ್ಲ' ಎಂದು ಲಾವೋಸ್‌ನಲ್ಲಿ ಬಂಧಿತರಾಗಿರುವ ಕಾರ್ಮಿಕರಲ್ಲಿ ಒಬ್ಬರಾದ ಸರೋಜ್ ಪಲೈ ವಿಡಿಯೊದಲ್ಲಿ ಅಳಲು ತೋಡಿಕೊಂಡಿದ್ದಾರೆ.