ಮುಂಬೈ: ಐಸಿಸಿ ವಿಶ್ವಕಪ್‌ನಡಿ ಶನಿವಾರ ನಡೆದ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿತ್ತು. 'ಡಿಸ್ನಿ ಪ್ಲಸ್ ಹಾಟ್‌ಸ್ಟಾರ್' ನಲ್ಲಿ 3.5 ಕೋಟಿ ಜನರು ಭಾರತ-ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸುವ ಮೂಲಕ ದಾಖಲೆ ಸೃಷ್ಟಿಯಾಗಿದೆ. ಇಷ್ಟೇ ಅಲ್ಲ, ವರ್ಷದ ಆರಂಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆದ ಐಪಿಎಲ್ ಫೈನಲ್ ಪಂದ್ಯದ ವೇಳೆ 3.2 ಕೋಟಿ ಪ್ರೇಕ್ಷಕರು ಪಂದ್ಯವನ್ನು ವೀಕ್ಷಿಸಿದರು.
ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಡಿಸ್ನಿ ಸ್ಟಾರ್ ಪಂದ್ಯದ ನೇರ ಪ್ರಸಾರ ಮಾಡಿತ್ತು. ಆದರೆ ಅದನ್ನು ವೀಕ್ಷಿಸುವವರ ಸಂಖ್ಯೆಯನ್ನು ದೂರದರ್ಶನ ವೀಕ್ಷಕರನ್ನು ಲೆಕ್ಕಾಚಾರ ಮಾಡುವ ಸಂಸ್ಥೆಯಾದ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಒಂದು ವಾರದ ನಂತರ ಮಾತ್ರ ನೀಡುತ್ತದೆ. ಡಿಸ್ನಿ ಸ್ಟಾರ್ ಪಂದ್ಯದ ವಿಶೇಷ ಪ್ರಸಾರ ಮತ್ತು ಮಾಧ್ಯಮ ಹಕ್ಕುಗಳನ್ನು ಹೊಂದಿದೆ.
ಪ್ರಮುಖ ಮಲ್ಟಿಪ್ಲೆಕ್ಸ್ ಆಪರೇಟರ್ ಪಿವಿಆರ್ ಐನಾಕ್ಸ್ ತನ್ನ ಆಯ್ದ ಥಿಯೇಟರ್ ಗಳಲ್ಲಿ ಭಾರತ-ಪಾಕಿಸ್ತಾನ ಪಂದ್ಯವನ್ನು ಪ್ರಸಾರ ಮಾಡಿತ್ತು. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇಂಡಿಯಾ ಮುಖ್ಯಸ್ಥ ಎಸ್. ಶಿವಾನಂದನ್ ಭಾರತ-ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗೆ ಆಗಮಿಸಿದ ವೀಕ್ಷಕರಿಗೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಪಂದ್ಯದ ಮುಖ್ಯಾಂಶಗಳು
ಪಾಕಿಸ್ತಾನ ಬ್ಯಾಟಿಂಗ್ ಆರಂಭಿಸಿ 42.5 ಓವರ್‌ಗಳಲ್ಲಿ 191 ರನ್ ಗಳಿಸಿ ಆಲೌಟ್ ಆಯಿತು. ನಂತರ ರೋಹಿತ್ ಶರ್ಮಾ ಅವರ 86 ರನ್ ಗಳ ನೆರವಿನಿಂದ ಭಾರತ 117 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಏಕದಿನ ವಿಶ್ವಕಪ್‌ನಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿದ್ದು ಎಂಟನೇ ಬಾರಿ. ಭಾರತ ಬ್ಯಾಟಿಂಗ್ ಗೆ ಇಳಿದಾಗ ಆರಂಭ ಉತ್ತಮವಾಗಿರಲಿಲ್ಲ, ಶುಭಮನ್ ಗಿಲ್ ಕೇವಲ 16 ರನ್ ಗಳಿಸಿ ಔಟಾದರೆ ವಿರಾಟ್ ಕೊಹ್ಲಿ ಕೂಡ 19 ರನ್ ಗಳಿಸಿ ಪೆವಿಲಿಯನ್ ಸೇರಿದ್ದರು.