ನವದೆಹಲಿ: ವಿದ್ಯಾರ್ಥಿಗಳ ಮೌಲ್ಯಮಾಪನ, ಶಾಲೆಗಳ ಕಾರ್ಯಕ್ಷಮತೆ ಪರಿಶೀಲನೆಗಾಗಿ ಸ್ಥಾಪಿಸಲಾಗಿರುವ ರಾಷ್ಟ್ರ ಮಟ್ಟದ ನಿಯಂತ್ರಣ ವ್ಯವಸ್ಥೆಯಾದ 'ಪರಖ್ (ಪಿಎಆರ್‌ಎಕೆಎಚ್) ನವೆಂಬರ್ 3ರಂದು ರಾಜ್ಯ ಶಿಕ್ಷಣ ಸಾಧನೆ ಸಮೀಕ್ಷೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಾದ್ಯಂತ 1.10 ಕೋಟಿ ವಿದ್ಯಾರ್ಥಿಗಳನ್ನು ಈ ಸಮೀಕ್ಷೆಯು ಒಳಗೊಳ್ಳಲಿದೆ.
ರಾಜ್ಯದಾದ್ಯಂತ ಶಾಲಾ ಮಕ್ಕಳ ಕಲಿಕೆಯಲ್ಲಿ ಯಾವ ರೀತಿ ಸುಧಾರಣೆಯಾಗಬೇಕಿದೆ ಎನ್ನುವುದನ್ನು ಗುರುತಿಸುವುದು ಸಮೀಕ್ಷೆಯ ಉದ್ದೇಶವಾಗಿದೆ.
ಶಿಕ್ಷಣ ಸಚಿವಾಲಯ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ವಾರ್ಷಿಕ ರಾಷ್ಟ್ರೀಯ ಸಾಧನಾ ಸಮೀಕ್ಷೆ (ಎನ್‌ಎಎಸ್) ನಡೆಸುತ್ತಿದೆ. ಇದಕ್ಕೂ ಮುನ್ನ ರಾಜ್ಯ ಶಿಕ್ಷಣ ಸಾಧನೆ ಸಮೀಕ್ಷೆ ನಡೆಸಲಾಗುತ್ತದೆ.
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಅಡಿಯಲ್ಲಿ ಪರಖ್ ಕೈಗೊಳ್ಳುತ್ತಿರುವ ಮೊದಲ ಸಮೀಕ್ಷೆ ಇದಾಗಿದೆ.