HEALTH TIPS

ಕೇರಳದ ಮೊದಲ 3D ಮುದ್ರಿತ ಕಟ್ಟಡ ಲೋಕಾರ್ಪಣೆ

              ತಿರುವನಂತಪುರ: ಕೇರಳದ ಮೊದಲ 3ಡಿ-ಮುದ್ರಿತ ಕಟ್ಟಡ 'ಅಮೇಜ್‌ 28' ತಿರುವನಂತಪುರದ ಪಿಟಿಆರ್ ನಗರದ ನಿರ್ಮಿತಿ ಕೇಂದ್ರದ ಆವಣರಣದಲ್ಲಿ ನಿರ್ಮಿಸಲಾಗಿದೆ.

             ಈ ಕಟ್ಟಡ ನಿರ್ಮಿಸಲು ಕೇವಲ 28 ದಿನಗಳನ್ನು ತೆಗೆದುಕೊಳ್ಳಲಾಗಿದೆ. ಚೆನೈ ಮೂಲದ ಕಟ್ಟಡ ನಿರ್ಮಾಣ ಸಂಸ್ಥೆ 'ತ್ವಾಸ್ತ' ಈ ಕಟ್ಟಡವನ್ನು ನಿರ್ಮಾಣದ ಜವಾಬ್ದಾರಿಯನ್ನು ತೆಗೆದುಕೊಂಡಿತ್ತು.

                                ಮಂಗಳವಾರ ಈ ಕಟ್ಟಡದ ಉದ್ಘಾಟನೆ ಮಾಡಲಾಗಿದೆ.


               'ಸಾಮಾನ್ಯ ಕಟ್ಟಡಗಳಿಗಿಂತ ಈ ರೀತಿಯ ಕಟ್ಟಡಗಳನ್ನು ತ್ವರಿತವಾಗಿ ನಿರ್ಮಾಣ ಮಾಡಬಹುದು. ಇದರಲ್ಲಿ ವೇಸ್ಟೇಜ್‌ ಕಡಿಮೆ. ಸಭಾಂಗಣ ನಿರ್ಮಾಣಕ್ಕೆ ಹೆಚ್ಚು ಸಮಯ ತೆಗೆದುಕೊಂಡಿದ್ದು, 3D ವಾಲ್ ಪ್ರಿಂಟಿಂಗ್ ಪೂರ್ಣಗೊಳಿಸಲು ಕೇವಲ 2 ದಿನಗಳನ್ನು ತೆಗೆದುಕೊಂಡಿದ್ದೇವೆ' ಎಂದು ಕಂಪೆನಿ ಮುಖ್ಯಸ್ಥ ಪ್ರವೀಣ್‌ ನಾಯರ್ ಹೇಳಿದ್ದಾರೆ.

                 'ಇದೊಂದು ಪ್ರಯೋಗಾತ್ಮಕ ಯೋಜನೆಯಾಗಿದ್ದು, 380 ಚದರ ಅಡಿಯ ಈ ಕಟ್ಟಡ ನಿರ್ಮಿಸಲು ಸುಮಾರು ₹11 ವೆಚ್ಚವಾಗಿದೆ' ಎಂದು ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries