ಇಂದು ಹೆಚ್ಚಿನ ಜನರು ತಮ್ಮ ಸ್ಮಾರ್ಟ್‍ಪೋನ್‍ಗಳಲ್ಲಿ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ವಾಟ್ಸ್ ಆಫ್ ಬಳಸುತ್ತಾರೆ.
ಆದರೆ ವಾಟ್ಸ್ ಆಫ್ ಆಂಡ್ರೋಯ್ಡ್ 4.4 ಅಥವಾ ಆಂಡ್ರೋಯ್ಡ್ ಕಿಟ್ ಕೇಟ್ ಎಂದು ಕರೆಯಲ್ಪಡುವ ಆವೃತ್ತಿಯಲ್ಲಿ ಸೇವೆಗಳನ್ನು ಸ್ಥಗಿತಗೊಳಿಸಿದೆ. ಈ ಆವೃತ್ತಿಯನ್ನು ಹೊಂದಿರುವ ಸ್ಮಾರ್ಟ್ ಪೋನ್ ಬಳಕೆದಾರರು ತಮ್ಮ ಪೋನ್ ಸಾಫ್ಟ್‍ವೇರ್ ಅನ್ನು ಆಂಡ್ರೋಯ್ಡ್ 5.0 ಗೆ ನವೀಕರಿಸಿದರೆ ಅಥವಾ ಅದು ಸಾಧ್ಯವಾಗದಿದ್ದರೆ, ಹೊಸ ಪೋನ್‍ಗೆ ಬದಲಾಯಿಸಿದರೆ ಮಾತ್ರ ಸೇವೆಗಳನ್ನು ಸ್ವೀಕರಿಸುವುದನ್ನು ಮುಂದುವರಿಸಲು ಸಾಧ್ಯವಾಗುತ್ತದೆ.
ಆಂಡ್ರಾಯ್ಡ್ 4.4 ಆವೃತ್ತಿಯನ್ನು ಸೆಪ್ಟೆಂಬರ್ 2013 ರಲ್ಲಿ ಬಿಡುಗಡೆ ಮಾಡಲಾಯಿತು. ಗೂಗಲ್ ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಒಟ್ಟು ಸ್ಮಾರ್ಟ್ ಪೋನ್ ಬಳಕೆದಾರರಲ್ಲಿ ಶೇಕಡಾ 0.5 ರಿಂದ 0.7 ರಷ್ಟು ಜನರು ಆಂಡ್ರಾಯ್ಡ್ 4.4 ಹೊಂದಿರುವ ಪೋನ್‍ಗಳನ್ನು ಬಳಸುತ್ತಿದ್ದಾರೆ. ವಾಟ್ಸಾಪ್ ಇತ್ತೀಚೆಗೆ ಹಲವು ವೈಶಿಷ್ಟ್ಯಗಳನ್ನು ತಂದಿದೆ. ಬಹು ಪೋನ್ ಸಂಖ್ಯೆಗಳ ಬಳಕೆದಾರರು ಈಗ ಒಂದೇ ಪೋನ್ ಮೂಲಕ ಒಂದೇ ಸಮಯದಲ್ಲಿ ಅನೇಕ ವಾಟ್ಸ್ ಆಫ್ ಖಾತೆಗಳಿಗೆ ಲಾಗ್ ಇನ್ ಮಾಡಬಹುದು.