ನವದೆಹಲಿ: ಜಾಗತಿಕ ಗ್ಯಾಜೆಟ್ ದೈತ್ಯ ಆ್ಯಪಲ್ ಸಂಸ್ಥೆಯ ಭಾರತ ಘಟಕ ಹಾಲಿ ವಿತ್ತೀಯ ವರ್ಷದಲ್ಲಿ ಶೇ.48ರಷ್ಟು ಏರಿಕೆ ಆದಾಯ ಏರಿಕೆ ಕಂಡಿದ್ದು, ಶೇ.77ರಷ್ಟು ಲಾಭಾಂಶ ಕಂಡಿದೆ ಎಂದು ವರದಿಯೊಂದು ಹೇಳಿದೆ.
ಖ್ಯಾತ ವಾಣಿಜ್ಯ ವಿಚಕ್ಷಣ ಸಂಸ್ಥೆ ಟೋಫ್ಲರ್ ಒದಗಿಸಿದ ಹಣಕಾಸು ವಿವರಗಳ ಪ್ರಕಾರ, ಆ್ಯಪಲ್ ಇಂಡಿಯಾ 2022 ರ ಹಣಕಾಸು ವರ್ಷದಲ್ಲಿ 33,381 ಕೋಟಿ ರೂಪಾಯಿ ಆದಾಯವನ್ನು ದಾಖಲಿಸಿತ್ತು. ಕಂಪನಿಯ ಲಾಭಾಂಶವು ಹಣಕಾಸು ವರ್ಷ 2022 ರಲ್ಲಿ 1,263 ಕೋಟಿ ರೂಪಾಯಿ ಆಗಿದ್ದು, ಹಾಲಿ ಹಣಕಾಸು ವರ್ಷ 2023ರಲ್ಲಿ ಶೇ. 77 ರಷ್ಟು ಏರಿಕೆಯಾಗಿ 2,230 ಕೋಟಿ ರೂಪಾಯಿ ಏರಿಕೆಯಾಗಿದೆ ಎಂದು ತಿಳಿಸಿದೆ.
ಟೋಫ್ಲರ್ ವರದಿಯಂತೆ, 2022-23ನೇ ಹಣಕಾಸು ವರ್ಷದಲ್ಲಿ ಕಂಪನಿಯ ಉತ್ಪನ್ನಗಳ ಮಾರಾಟ ಶೇಕಡಾ 48ರಷ್ಟು ಏರಿಕೆಯಾಗಿದ್ದು ಆದಾಯ 49,321 ಕೋಟಿ ರೂ.ಗೆ ಮುಟ್ಟಿದೆ. ಇದೇ ವೇಳೆ ಕಂಪನಿಯ ನಿವ್ವಳ ಲಾಭ ಶೇಕಡಾ 76ರಷ್ಟು ಹೆಚ್ಚಳವಾಗಿದ್ದು 2,229 ಕೋಟಿ ರೂ.ಗಳಿಗೆ ತಲುಪಿದೆ. ಹಣಕಾಸು ವರ್ಷ 2022ರಲ್ಲಿ ಕಂಪನಿಯ ವೆಚ್ಚ ಸುಮಾರು 31,693 ಕೋಟಿ ರೂಪಾಯಿ ಆಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದು ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಆಪಲ್‌ನ ನಿವ್ವಳ ಲಾಭದಲ್ಲಿ ಕಂಡು ಬಂದಿರುವ ಅತ್ಯಂತ ವೇಗದ ಬೆಳವಣಿಗೆಯಾಗಿದೆ ಎಂದು ಎಕನಾಮಿಕ್ ಟೈಮ್ಸ್ ವರದಿಯಲ್ಲಿ ತಿಳಿಸಿದೆ.
ಅಮೆರಿಕ ಮೂಲದ ದೈತ್ಯ ಟೆಕ್ ಕಂಪನಿಯು ಕಂಪನಿಗಳ ರಿಜಿಸ್ಟ್ರಾರ್ (ಆರ್‌ಒಸಿ)ಗೆ ಸಲ್ಲಿಸಿದ ಮಾಹಿತಿಯನ್ನು ಉಲ್ಲೇಖಿಸಿ ಪತ್ರಿಕೆ ಈ ವರದಿ ಮಾಡಿದ್ದು, ಉತ್ತಮ ಲಾಭದ ಮಾರ್ಜಿನ್‌ಗಳನ್ನು ಹೊಂದಿರುವ ಹೊಸ ಪೀಳಿಗೆಯ ಸಾಧನಗಳ ಮಾರಾಟ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಲಾಭ ದೊಡ್ಡ ಮಟ್ಟಕ್ಕೆ ಏರಿಕೆಯಾಗಿದೆ ಎಂದು ವಿಶ್ಲೇಷಕರ ಹೇಳಿಕೆಯನ್ನು ಉಲ್ಲೇಖಿಸಿ ಎಕನಾಮಿಕ್ ಟೈಮ್ಸ್ ತಿಳಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ಉತ್ಪನ್ನಗಳ ಬಿಡಿಭಾಗಗಳ ದರ ಕಡಿಮೆಯಾಗಿರುವುದೂ ಲಾಭ ಹೆಚ್ಚಲು ಮತ್ತೊಂದು ಕಾರಣವಾಗಿದೆ.
ಟಾಟಾದಿಂದ ಐಫೋನ್ ಉತ್ಪಾದನೆ
ಟಾಟಾ ಗ್ರೂಪ್ (ಖಿಂಖಿಂ) ಭಾರತೀಯ ಮಾರುಕಟ್ಟೆಗಾಗಿ ಮತ್ತು ಜಾಗತಿಕ ಗ್ರಾಹಕರಿಗಾಗಿ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸಲಿದೆ ಎಂಬ ಸುದ್ದಿ ಹೊರಬಿದ್ದ ಒಂದು ದಿನದ ಬಳಿಕ ಆಪಲ್‌ನ ಆದಾಯದ ವರದಿ ಹೊರಬಿದ್ದಿದೆ. ವಿಸ್ಟ್ರಾನ್ ಕಾರ್ಪೊರೇಷನ್ ಕೋಲಾರದ ನರಸಾಪುರದಲ್ಲಿರುವ ಮೊಬೈಲ್ ಫೋನ್ ಉತ್ಪಾದನಾ ಘಟಕವನ್ನು ಟಾಟಾ ಗ್ರೂಪ್‌ಗೆ ಮಾರಾಟ ಮಾಡಲು ತೀರ್ಮಾನಿಸಿರುವುದರಿಂದ ಇದೀಗ ಟಾಟಾ ದೇಶದೊಳಗೆ ಐಫೋನ್‌ಗಳನ್ನು ತಯಾರಿಸುವ ಮೊದಲ ಭಾರತೀಯ ಕಂಪನಿಯಾಗಲಿದೆ.