ಜೇರುಸಲೇಂ: ಗಾಜಾ ಪಟ್ಟಿಯ ಹಮಾಸ್ ಉಗ್ರರು ಇಸ್ರೇಲ್ ಮೇಲೆ ಸುಮಾರು 5,000 ರಾಕೆಟ್‌ಗಳಿಂದ ದಾಳಿ ನಡೆಸಿದ್ದಾರೆ.
ಜೇರುಸಲೇಂ: ಗಾಜಾ ಪಟ್ಟಿಯ ಹಮಾಸ್ ಉಗ್ರರು ಇಸ್ರೇಲ್ ಮೇಲೆ ಸುಮಾರು 5,000 ರಾಕೆಟ್‌ಗಳಿಂದ ದಾಳಿ ನಡೆಸಿದ್ದಾರೆ.
ಇದರಿಂದ ದಕ್ಷಿಣ ಇಸ್ರೇಲ್‌ನಲ್ಲಿ ಒಬ್ಬ ನಾಗರಿಕ ಮೃತಪಟ್ಟು 16 ಜನ ಗಾಯಗೊಂಡಿದ್ದಾರೆ. ಇಸ್ರೇಲ್‌ಗೆ ಇದು ಅನಿರೀಕ್ಷಿತ ದಾಳಿಯಾಗಿದ್ದು ಆ ದೇಶದ ಸೇನೆಯಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ.
ಇಸ್ರೇಲ್ ಆಕ್ರಮಣಕ್ಕೆ ಇತಿಶ್ರೀ ಹಾಡುತ್ತೇವೆ ಎಂದು ಹಮಾಸ್ ರಾಕೆಟ್ ದಾಳಿ ಮಾಡಿದೆ.
ಈ ನಡೆಗೆ ಕೆರಳಿರುವ ಇಸ್ರೇಲ್, ಗಾಜಾ ವಿರುದ್ಧ ಸ್ಟೇಟ್ ಆಫ್ ವಾರ್ ಘೋಷಣೆ ಮಾಡಿದೆ. ಬಾಂಬ್ ಸೆಲ್ಟರ್‌ಗಳಲ್ಲಿ ಆಶ್ರಯ ಪಡೆಯಿರಿ ಎಂದು ತನ್ನ ನಾಗರಿಕರಿಗೆ ಹೇಳಿದೆ.
ಹಮಾಸ್ ದಾಳಿಗೆ ದಕ್ಷಿಣ ಇಸ್ರೇಲ್‌ನಲ್ಲಿ ಡಿರೋಟ್ ಪ್ರದೇಶದಲ್ಲಿ ಮಹಿಳೆ ಮೃತಪಟ್ಟಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಇಸ್ರೇಲ್ ಸೇನೆ, ಹಮಾಸ್ ಉಗ್ರರು ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದೆ.