ಕಾಸರಗೋಡು: ಆಟೋ ಚಾಲನೆ ವೇಳೆ ಹೆಲ್ಮೆಟ್ ಧರಿಸದ್ದಕ್ಕೆ ಮೋಟಾರು ವಾಹನ ಇಲಾಖೆ ದಂಡ ವಿಧಿಸಿದೆ. ಕಾಞಂಗಾಡ್‍ನ ನಿರಿಕಿಲಕ್ಕಾಡ್ ಆಟೋ ನಿಲ್ದಾಣದ ಚಾಲಕ ಪ್ರಸಾದ್ ದಂಡ ಪಾವತಿಸಲು ನೋಟೀಸು ಪಡೆದವರು.
ದಂಡ ವಿಧಿಸಿರುವ ವಿಷಯ ಗುರುವಾರ ಪ್ರಸಾದ್ ಅವರಿಗೆ ತಿಳಿಯಿತು. 500 ಮರುಪಾವತಿಸಲು ನೋಟೀಸಲ್ಲಿ ತಿಳಿಸಲಾಗಿದೆ.
ನೋಟಿಸ್ ನಲ್ಲಿ ನೀಡಿರುವ ವಾಹನದ ವಿವರ ಸರಿಯಾಗಿದೆ ಎನ್ನುತ್ತಾರೆ ಪ್ರಸಾದ್. ಗುರುವಾರ ತೆರಿಗೆ ಪಾವತಿಸಲು ಅಕ್ಷಯ ಕೇಂದ್ರಕ್ಕೆ ತೆರಳಿದ್ದಾಗ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ್ದಕ್ಕೆ ದಂಡ ಕಟ್ಟಬೇಕು ಎಂದು ತಿಳಿದು ಬಂದಿತು.
ನೋಟಿಸ್ ನಲ್ಲಿ ಪ್ರಸಾದ್ ಅವರ ಆಟೋ ನಂಬರ್ ಸೇರಿದಂತೆ ಎಲ್ಲ ಮಾಹಿತಿ ಸರಿಯಾಗಿದೆ. ಆದರೆ ನೋಟಿಸ್ ನಲ್ಲಿ ನೀಡಿರುವ ಚಿತ್ರ ಬೈಕ್ ನದ್ದಾಗಿರುವುದು ಇದು ಎ.ಐ. ಕ್ಯಾಮರಾದ ಕರಾಮತ್ತೆಂದು ತಿಳಿದುಬಂದಿದೆ. ಎ.ಐ. ಕ್ಯಾಮರಾ ಅಳವಡಿಸಿದ ಬಳಿಕ ರಾಜ್ಯಾದ್ಯಂತ ಹಲವೆಡೆ ಇಂತಹ ಘಟನೆಗಳು ವರದಿಯಾಗುತ್ತಿದೆ.