ತಿರುವನಂತಪುರಂ: ಕೇರಳದಲ್ಲಿ ಎಡಪಂಥೀಯ ಭಯೋತ್ಪಾದನೆ ಪ್ರಬಲವಾಗಿದೆ ಎಂದು ಗುಪ್ತಚರ ವರದಿ ಹೇಳಿದೆ. ಗುಪ್ತಚರ ವರದಿಯ ಪ್ರಕಾರ, ವಯನಾಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಮತ್ತು 50 ಸದಸ್ಯರ ಶಸ್ತ್ರಸಜ್ಜಿತ ತಂಡವು ಕಾಡಿನಲ್ಲಿ ಬೀಡುಬಿಟ್ಟಿದೆ ಎಂದು ಹೇಳಲಾಗಿದೆ.
ಆದರೆ, ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆಯನ್ನು ರಾಜ್ಯ ನಿರ್ಲಕ್ಷಿಸಿದೆ ಎಂಬ ವರದಿಗಳಿವೆ. ಈ ಕುರಿತು ತುರ್ತು ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
ನಕ್ಸಲ್-ಕಮ್ಯುನಿಸ್ಟ್ ಭಯೋತ್ಪಾದನೆಯನ್ನು ದೇಶದಿಂದ ನಿರ್ಮೂಲನೆ ಮಾಡುವ ಕೇಂದ್ರದ ಪ್ರಯತ್ನಗಳಿಗೆ ಹಿನ್ನಡೆಯಾಗುವ ಕ್ರಮವನ್ನು ಕೇರಳ ಕೈಗೊಳ್ಳುತ್ತಿದೆ. ಭಯೋತ್ಪಾದಕರು ಗುಂಪುಗುಂಪಾಗಿ ಗ್ರಾಮಗಳಿಗೆ ನುಗ್ಗುತ್ತಿದ್ದಾರೆ ಎಂದು ಮಾಹಿತಿ ನೀಡಿದರೂ ಸರಕಾರ ಗಂಭೀರ ತನಿಖೆ ನಡೆಸಿಲ್ಲ.