ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ 'ಕಾಂತಾರ' ಸಿನಿಮಾ 2022ರಲ್ಲಿ ಬಿಡುಗಡೆಯಾಗಿದ್ದು ಪ್ಯಾನ್ ಇಂಡಿಯಾ ಚಿತ್ರವಾಗಿತ್ತು. ಸದ್ಯ ಇದೀಗ 'ಕಾಂತಾರ' ಸಿನಿಮಾ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಗೋವಾದಲ್ಲಿ ನ.28ರಿಂದ ಚಿತ್ರೋತ್ಸವದಲ್ಲಿ ಪ್ರದರ್ಶನ ನಡೆಯಲಿದೆ.

ಈ ಚಿತ್ರದಲ್ಲಿ ಜಾನಪದ ಸೊಗಡು, ಭೂತಾರಾಧನೆ, ಕಂಬಳ ಮತ್ತು ದೈವ ನಂಬಿಕೆ ಪ್ರಧಾನವಾಗಿದೆ. ಕರಾವಳಿಯ ಕೆರಾಡಿಯಲ್ಲಿ ಸೆಟ್ ಹಾಕಿ ಈ ಚಲನಚಿತ್ರ ಚಿತ್ರೀಕರಿಸಲಾಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರದ ಪ್ರಧಾನ ಛಾಯಾಗ್ರಹಣ ಆಗಸ್ಟ್ 2021 ರಲ್ಲಿ ಪ್ರಾರಂಭವಾಯಿತು.
ಚಿತ್ರದ ನಾಯಕಿಯಾಗಿ ಸಪ್ತಮಿ ಗೌಡ ನಟಿಸಿದ್ದರೆ, ಅಚ್ಚುತ್ , ಕಿಶೋರ್ , ಮಾನಸಿ ಸುಧೀರ್ , ಸ್ವರಾಜ್ ಶೆಟ್ಟಿ ಸೇರಿದಂತೆ ಹಲವು ತಾರಾಗಣವಿತ್ತು.
ಕಾಂತಾರ 54 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗುವ ಮೂಲಕ ತನ್ನ ಹೆಸರಿಗೆ ಮತ್ತೊಂದು ಹೆಗ್ಗಳಿಕೆಯನ್ನ ತಂದುಯಕೊಂಡಿದೆ.
ಚಿತ್ರಕ್ಕೆ ಹೂಡಿಕೆ ಮಾಡಿದ್ದು ಬರೀ 16 ಕೋಟಿ. 14 ಕೋಟಿಯಲ್ಲಿ ಮಾಡಲು ಉದ್ದೇಶಿಸಿದ್ದ ಸಿನಿಮಾಗೆ ಸ್ವಲ್ಪ ಹೆಚ್ಚು ಖರ್ಚಾಗಿತ್ತು. ಆದರೆ ಬ್ಲಾಕ್ ಬ್ಲಸ್ಟರ್ ಹಿಟ್ ಆಗಿ ಚಿತ್ರಮಂದಿರದಲ್ಲಿ ಕೊಳ್ಳೆ ಹೊಡೆಯಿತು. ಈಗ ಕಾಂತಾರ 2 ಚಿತ್ರೀಕರಣ ನಡೆಯುತ್ತಿದೆ.
ಸದ್ಯ ಕಾಂತಾರ-2 ಸಿನಿಮಾಗಾಗಿ ಪ್ರೇಕ್ಷಕರು ಕಾದು ಕುಳಿತಿದ್ದಾರೆ. ಕರ್ನಾಟಕ ಸರ್ಕಾರವು, ಈ ಚಲನಚಿತ್ರದ ಕಾರಣದಿಂದಾಗಿ, 60 ವರ್ಷ ಮೇಲ್ಪಟ್ಟ ಭೂತ ಕೋಲ ಕಲಾವಿದರಿಗೆ ಮಾಸಿಕ ಭತ್ಯೆಯನ್ನು ಕೂಡ ಘೋಷಿಸಿತ್ತು.
ಅಷ್ಟರ ಮಟ್ಟಿನಲ್ಲಿ ಈ ಸಿನಿಮಾ ಹಿಟ್ ಆಗಿದ್ದು, ಸದ್ಯ ಎಲ್ಲರ ಗಮನ ಕಾಂತಾರ-2 ಸಿನಿಮಾದ ಮೇಲಿರುವ ಬೆನ್ನಲ್ಲೇ ಈ ಚಿತ್ರ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ ಆಗಿರೂದು ಖುಷಿಯ ವಿಚಾರ.