ಪೆರ್ಲ: ಶ್ರೀಶಾರದಾ ಮರಾಟಿ ಸಮಾಜ ಸೇವಾ ಸಂಘ ಪೆರ್ಲ, ಶಾರದಾ ಮರಾಟಿ ಮಹಿಳಾ ವೇದಿಕೆ ಪೆರ್ಲ, ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ನ ಸಹಯೋಗದೊಂದಿಗೆ ಪೆರ್ಲದ ಬಜಕೂಡ್ಲಿನಲ್ಲಿರುವ ಮರಾಟಿ ಬೋರ್ಡಿಂಗ್ ಹಾಲ್ ನ 5ನೇ ವಾರ್ಷಿಕೋತ್ಸವವು ನಾಳೆ(ಅ.15ಕ್ಕೆ) ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಇದರ ಅಂಗವಾಗಿ ಅಂದು ಬೆಳಗ್ಗೆ 7.30ಕ್ಕೆ ಗಣಪತಿ ಹವನ, 9ಕ್ಕೆ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಮತ್ತು ಭಜನೆ, ಮಧ್ಯಾಹ್ನ 12.30ಕ್ಕೆ ಮಹಾ ಮಂಗಳಾರತಿ ಜರಗಲಿದೆ. ಮಧ್ಯಾಹ್ನ 2 ಕ್ಕೆ ಜರಗುವ ಸಭಾ ಕಾರ್ಯಕ್ರಮದಲ್ಲಿ ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ.ಬಿ.ಜಿ.ನಾಯ್ಕ್ ಅಧ್ಯಕ್ಷತೆಯಲ್ಲಿ ಐಆರ್ ಎಸ್ ಡೆಪ್ಯುಟಿ ಕಮೀಷನರ್ ಡಾ.ಮಿತೋಶ್ ರಾಘವನ್ ಉದ್ಘಾಟಿಸುವರು. ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಆಶೋಕ್ ನಾಯ್ಕ್ ಕೆದಿಲ, ಕೆ.ಜಿ. ನಾಯ್ಕ್ ಮುಖ್ಯ ಅತಿಥಿಗಳಾಗಿ ಪಾಳ್ಗೊಳ್ಳುವರು. ಶಾರದಾ ಮರಾಟಿ ಮಹಿಳಾ ವೇದಿಕೆ ಅಧ್ಯಕ್ಷೆ ವಾರಿಜ ಅಡ್ಯನಡ್ಕ, ಸತೀಶ್ ಕುಮಾರ್ ಕಯ್ಯಾರು, ಕೆನರಾ ಬ್ಯಾಂಕಿನ ನಿವೃತ್ತ ಹಿರಿಯ ಪ್ರಬಂಧಕ ಎನ್.ಪಿ.ನಾಯ್ಕ್, ಶೋಭಾ ಗೋಪಾಲನ್ ಮಂಜೇಶ್ವರ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ನಿವೃತ್ತ ಪ್ರಬಂಧಕ ನಾರಾಯಣ ನಾಯ್ಕ್, ಈಶ್ವರ ನಾಯ್ಕ್ ನೀರೊಳ್ಯ, ಶ್ರೀಶಾರದಾ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಬಾರಿಕ್ಕಾಡ್ ಮೊದಲಾದವರು ಭಾಗವಹಿಸುವರು.ಈ ಸಂದರ್ಭದಲ್ಲಿ ಎಸ್ಸಸೆಲ್ಸಿಯಿಂದ ಮೇಲ್ಪಟ್ಟು ಸ್ನಾತಕೋತ್ತರ ಪದವಿಯವರೆಗೆ ಗರಿಷ್ಠ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 2022-23ರಲ್ಲಿ ಸೇವಾ ನಿವೃತ್ತರಾದ ಸಂಘದ ಸದಸ್ಯರಿಗೆ ಹಾಗೂ 5 ಮಂದಿ ಸಮಾಜದ ಹಿರಿಯರಿಗೆ,ರಾಷ್ಟ್ರ,ರಾಜ್ಯ ಮಟ್ಟದಲ್ಲಿ ವಿವಿಧ ಸಾಧನಗೈದ ಸಾಧಕರಿಗೆ ಸನ್ಮಾನ ಜರಗಲಿದೆ.ಬಳಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳುವುದು.