HEALTH TIPS

5 ವರ್ಷದ ಉದ್ಯೋಗ ಮಾನ್ಯತಾ ಪತ್ರ ನೀಡಲು ನಿರ್ಧರಿಸಿದ ಅಮೆರಿಕ

                  ವಾಷಿಂಗ್ಟನ್‌: 'ಗ್ರೀನ್‌ ಕಾರ್ಡ್‌ನ ನಿರೀಕ್ಷೆಯಲ್ಲಿರುವವರು ಸೇರಿದಂತೆ ವಲಸಿಗಯೇತರ ಕೆಲ ವರ್ಗಗಳಿಗೆ ಐದು ವರ್ಷಗಳಿಗೆ ಉದ್ಯೋಗ ಮಾನ್ಯತಾಪತ್ರ (ಇಎಡಿ) ನೀಡಲಾಗುವುದು' ಎಂದು ಅಮೆರಿಕ ಶುಕ್ರವಾರ ಪ್ರಕಟಿಸಿದೆ.

                ಸರ್ಕಾರದ ಈ ಕ್ರಮವು, ಅಮೆರಿಕದಲ್ಲಿ ವಾಸಿಸುತ್ತಿರುವ ಸಾವಿರಾರು ಭಾರತೀಯರಿಗೆ ಅನುಕೂಲವಾಗಲಿದೆ.

              ಅಮೆರಿಕದ ಪೌರತ್ವ ಮತ್ತು ವಲಸಿಗ ಸೇವೆ ವಿಭಾಗವು (ಯುಎಸ್‌ಸಿಐಎಸ್‌), 'ಇಎಡಿ ಸಿಂಧುತ್ವವನ್ನು 5 ವರ್ಷಕ್ಕೆ ಹೆಚ್ಚಿಸಲಾಗುವುದು. ಇಎಡಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ' ಎಂದು ತಿಳಿಸಿದೆ.

                     ಆಶ್ರಯ ಪಡೆದಿರುವವರು, ತಡೆಹಿಡಿದಿರುವವರು, ಐಎನ್‌ಎ 245 ಅನ್ವಯ ಹೊಂದಾಣಿಕೆ ಸ್ಥಿತಿಯಲ್ಲಿ ಇರುವವರು, ಗಡಿಪಾರು ತಡೆಯಾಜ್ಞೆ, ರದ್ಧತಿ ಸ್ಥಿತಿಯಲ್ಲಿ ಇರುವವರು ಅರ್ಜಿ ಸಲ್ಲಿಸಬೇಕಾದವರಲ್ಲಿ ಸೇರಿದ್ದಾರೆ ಎಂದು ತಿಳಿಸಿದೆ.

               ಇಎಡಿ ಅವಧಿಯನ್ನು ಗರಿಷ್ಠ 5 ವರ್ಷಕ್ಕೆ ವಿಸ್ತರಿಸುವುದರಿಂದ ಹೊಸದಾಗಿ ಐ-765 ಅರ್ಜಿಗಳ ಸಲ್ಲಿಕೆ, ಉದ್ಯೋಗ ಮಾನ್ಯತೆ ಪತ್ರಕ್ಕಾಗಿ ಅರ್ಜಿಸಲ್ಲಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.

                 ಅಧ್ಯಯನವೊಂದರ ಪ್ರಕಾರ, ಸುಮಾರು 10.5 ಲಕ್ಷ ಭಾರತೀಯರು ಉದ್ಯೋಗ ಆಧಾರಿತ ಗ್ರೀನ್‌ ಕಾರ್ಡ್‌ ನಿರೀಕ್ಷೆಯಲ್ಲಿದ್ದಾರೆ. ಈ ಪೈಕಿ ಸುಮಾರು 4 ಲಕ್ಷ ಜನರು ಗ್ರೀನ್‌ ಕಾರ್ಡ್ ಪಡೆಯುವ ಮೊದಲೇ ಮೃತಪಟ್ಟಿದ್ದಾರೆ.

            ಗ್ರೀನ್‌ ಕಾರ್ಡ್ ಅನ್ನು ಅಧಿಕೃತವಾದ ಶಾಶ್ವತ ನಿವಾಸಿ ಗುರುತುಪತ್ರ ಎಂದು ಗುರುತಿಸಲಾಗುತ್ತದೆ. ಕಾರ್ಡ್‌ ಉಳ್ಳವರಿಗೆ ಅಮೆರಿಕದಲ್ಲಿ ವಾಸಿಸುವ ಹಕ್ಕಿದೆ ಎಂದು ಅಮೆರಿಕ ಸರ್ಕಾರ ಅಧಿಕೃತವಾಗಿ ಮಾನ್ಯ ಮಾಡಿದ ಕಾರ್ಡ್‌ ಇದಾಗಿದೆ.

                ಉದ್ಯೋಗ ಆಧಾರಿತ ಗ್ರೀನ್‌ ಕಾರ್ಡ್‌ನ ನಿರೀಕ್ಷೆಯಲ್ಲಿರುವವರ ಸಂಖ್ಯೆ ಈ ವರ್ಷ 18 ಲಕ್ಷಕ್ಕೆ ಏರಿದ್ದು, ದಾಖಲೆಯಾಗಿದೆ ಎಂದು ಕ್ಯಾಟೊ ಇನ್‌ಸ್ಟಿಟ್ಯೂಟ್‌ನ ಡೇವಿಡ್‌ ಜೆ. ಬೇರ್ ಅವರು ನಡೆಸಿರುವ ಅಧ್ಯಯನ ವರದಿ ತಿಳಿಸಿದೆ. ಈ 18 ಲಕ್ಷ ಅರ್ಜಿದಾರರ ಪೈಕಿ ಶೇ 63ರಷ್ಟು ಅಂದರೆ ಸುಮಾರು 11 ಲಕ್ಷ ಜನರು ಭಾರತೀಯರೇ ಆಗಿದ್ದಾರೆ ಎಂದು ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries