ಪೆರ್ಲ : ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಪೆರ್ಲ ಘಟಕದ ಸಾಮಾನ್ಯ ಸಭೆ ಪೆರ್ಲ ಪಡ್ರೆ ಸಭಾ ಭವನದಲ್ಲಿ ಜರುಗಿತು. ಸಂಘದ ಅಧ್ಯಕ್ಷ ಬಿ. ಪಿ. ಶೇಣಿ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಹೆಸರಿನಲ್ಲಿ ನೂತನ ಬ್ಯಾಂಕ್ ಖಾತೆ ತೆರೆಯಲು ತೀರ್ಮಾಣಿಸಲಾಯಿತು. ಈ ಸಂದರ್ಭ ಕೇಂದ್ರ ಸಮಿತಿಗೆ ವಿವಿಧ ಉಪಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕ್ರೀಡಾ ಸಮಿತಿಗೆ ಸಂಚಾಲಕರಾಗಿ ರಾಮಣ್ಣ ಪೂಜಾರಿ ಬಾಂಕಾನ, ಸಹಸಂಚಾಲಕರಾಗಿ ಶಿವಪ್ರಸಾದ್ ಮುಂಡಿತ್ತಡ್ಕ, ಜಯಲಕ್ಷ್ಮಿ ಕಾಟುಕುಕ್ಕೆ, ಪುಷ್ಪರಾಜ ಸಂಟನಡ್ಕ, ಮಹೇಶ ಬಜಕೂಡ್ಲು, ವಸಂತ ಶೇಣಿ, ಅನೀಶ್ ಕಾನ, ಸಂದೇಶ ಸೋಮಾಜೆ, ಸೇವಾಸಮಿತಿ ಸಂಚಾಲಕರಾಗಿ ಗಿರಿಯಪ್ಪ ಪೂಜಾರಿ ಗುಂಡಿತ್ತಾರು ಅವರನ್ನು ಆಯ್ಕೆ ಮಾಡಲಾಯಿತು. ಬಿಲ್ಲವ ಸಂಘದ ವತಿಯಿಂದ ಶ್ರೀ ಸತ್ಯಸಾಯಿ ಸೇವಾ ಸಮಿತಿ ಪೆರ್ಲ ಇವರ ಸಹಕಾರದೊಂದಿಗೆ ನವಂಬರ್ 5ರಂದು ಪೆರ್ಲದ ಪಡ್ರೆ ಸಭಾ ಭವನದಲ್ಲಿ ಸಾರ್ವಜನಿಕ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ನಡೆಸಲು ತೀರ್ಮಾನಿಸಲಾಯಿತು. ಅಂದು ಬೆಳಿಗ್ಗೆ 9ಕ್ಕೆ ಕಾಸರಗೋಡು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಅಧ್ಯಕ್ಷ ಮಹಾಲಿಂಗ ಭಟ್ ಕ್ಯಾಂಪ್ ಶಿಬಿರ ಉದ್ಘಾಟಿಸುವರು. ಬಿಲ್ಲವ ಸಂಘದ ಅಧ್ಯಕ್ಷ ಬಿ. ಪಿ. ಶೇಣಿ ಅಧ್ಯಕ್ಷತೆ ವಹಿಸುವರು.
ಬಿಲ್ಲವ ಸೇವಾ ಸಂಘದ ಪೆರ್ಲ ಘಟಕ ವತಿಯಿಂದ ಅ. 22ರಂದು ಗೆಜ್ಜೆಗಿರಿ ಶ್ರೀ ದೇಯಿಬೈದ್ಯೆತಿ ಕ್ಷೇತ್ರ ಹಾಗೂ ಹನುಮಗಿರಿ ಪಂಚಮುಖಿ ಹನುಮಾನ್ ಕ್ಷೇತ್ರಗಳಿಗೆ ಧಾರ್ಮಿಕ ಪ್ರವಾಸ ಕೈಗೊಳ್ಳಲು ತೀರ್ಮಾನಿಸಲಾಯಿತು. ಸಂಘದ ವತಿಯಿಂದ ನಡೆಸಲಾದ ಉಚಿತ ಉದ್ಯೋಗ ಮಾಹಿತಿ ಶಿಬಿರದ ಬಗ್ಗೆ ಅವಲೋಕನ ನಡೆಸಲಾಯಿತು.
ಮುಖಂಡರಾದ ರಾಮಕುಮಾರ್ ಮುಂಡಿತಡ್ಕ, ಮಹಿಳಾ ಸಂಘದ ಅಧ್ಯಕ್ಷೆ ರುಕ್ಮಿಣಿ ಬೆದ್ರಂಪಳ್ಳ, ವಿವಿಧ ಪ್ರಾದೇಶಿಕ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಮಹಿಳಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪದ್ಮನಾಭ ಸುವರ್ಣ ಸ್ವಾಗತಿಸಿದರು. ಕಾರ್ಯದರ್ಶಿ ಅಖಿಲೇಶ್ ಕಾನ ವಂದಿಸಿದರು.