ನವದೆಹಲಿ: ಚುನಾವಣೆ ನಡೆಯುವ ಐದು ರಾಜ್ಯಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಡಿಸೆಂಬರ್ 5ರವರೆಗೆ ನಡೆಸದಂತೆ ಚುನಾವಣಾ ಆಯೋಗವು ಗುರುವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ನವದೆಹಲಿ: ಚುನಾವಣೆ ನಡೆಯುವ ಐದು ರಾಜ್ಯಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಡಿಸೆಂಬರ್ 5ರವರೆಗೆ ನಡೆಸದಂತೆ ಚುನಾವಣಾ ಆಯೋಗವು ಗುರುವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ವಿಧಾನಸಭೆ ಚುನಾವಣೆ ನಡೆಯುವ ಐದು ರಾಜ್ಯಗಳಲ್ಲಿ ಮತ್ತು ಉಪಚುನಾವಣೆ ನಡೆಯಲಿರುವ ನಾಗಲ್ಯಾಂಡ್‌ನ ತಾಪೀ ಕ್ಷೇತ್ರದಲ್ಲಿ 'ಜಿಲ್ಲಾ ರಥ ಪ್ರಭಾರಿಗಳನ್ನು' ನೇಮಕ ಮಾಡಬಾರದು ಎಂದು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರಿಗೆ ಚುನಾವಣಾ ಆಯೋಗ ಸೂಚಿಸಿದೆ.
ನವೆಂಬರ್20ಕ್ಕೆ ಆರಂಭವಾಗುವ ಯಾತ್ರೆಗಾಗಿ 'ಜಿಲ್ಲಾ ರಥ ಪ್ರಭಾರಿ'ಗಳಾಗಿ ಹಿರಿಯ ಅಧಿಕಾರಿಗಳನ್ನು ನೇಮಿಸುವಂತೆ ಸಚಿವಾಲಯಗಳಿಗೆ ಪತ್ರ ಬಂದಿದೆ ಎಂಬುದು ಆಯೋಗದ ಗಮನಕ್ಕೆ ಬಂದಿದೆ ಎಂದು ಹೇಳಿದೆ.
ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಯಾತ್ರೆ ಸಾಗುವುದಿಲ್ಲ ಎಂದು ಸರ್ಕಾರ ಗುರುವಾರ ಸ್ಪಷ್ಟಪಡಿಸಿತ್ತು.
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ.