ನವದೆಹಲಿ: ನವೋದಯ ವಿದ್ಯಾಲಯ ಸಮಿತಿ (NVS) 6 ನೇ ತರಗತಿಗೆ ಪ್ರವೇಶಕ್ಕಾಗಿ ನಡೆಸಲಾಗುವ ಆಯ್ಕೆ ಪರೀಕ್ಷೆ (ಸೆಲೆಕ್ಷನ್ ಟೆಸ್ಟ್) ಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. NVS ಅಧಿಕೃತ ವೆಬ್‌ಸೈಟ್ navodaya.gov.in ನಲ್ಲಿ JNV 6 ನೇ ತರಗತಿ ಆಯ್ಕೆ ಪರೀಕ್ಷೆ ಹಂತ 1 ರ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ.
ಈಗ ಈ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳ ಪೋಷಕರು ಪೋರ್ಟಲ್‌ಗೆ ಹೋಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪೋಷಕರ ಅನುಕೂಲಕ್ಕಾಗಿ, ಸುಲಭವಾದ ಹಂತಗಳನ್ನು ಕೆಳಗೆ ನೀಡಲಾಗಿದೆ. ನಂತರ ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.
ಈ ರೀತಿ ಡೌನ್‌ಲೋಡ್ ಮಾಡಿ…
* ಅಧಿಕೃತ ವೆಬ್‌ಸೈಟ್ https://navodaya.gov.in ಗೆ ಭೇಟಿ ನೀಡಿ.
* ನಂತರ ಮುಖಪುಟದಲ್ಲಿ ಗೋಚರಿಸುವ JNVST ಅಡ್ಮಿಟ್ ಕಾರ್ಡ್ ಲಿಂಕ್ ಅನ್ನು ಕ್ಲಿಕ್ ಮಾಡಿ. ಈಗ ನಿಮ್ಮ ಮುಂದೆ ಇರುವ VI JNVST-2024 (ಹಂತ-I) ಲಿಂಕ್ ಅನ್ನು ಕ್ಲಿಕ್ ಮಾಡಿ.
*ಈಗ ಹೊಸ ಲಾಗಿನ್ ಪೇಜ್ ತೆರೆದುಕೊಳ್ಳುತ್ತದೆ. ಆಗ ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ. ಈಗ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿ, ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಡೌನ್‌ಲೋಡ್ ಮಾಡಲು ನೇರ ಲಿಂಕ್
ನವೆಂಬರ್ 4 ರಂದು ಪರೀಕ್ಷೆ
ಪರೀಕ್ಷೆಗೆ ಸಂಬಂಧಿಸಿದ ಇತರ ಸೂಚನೆಗಳಿಗಾಗಿ JNVST 6 ನೇ ತರಗತಿ ಪ್ರವೇಶ ಪರೀಕ್ಷೆ ಪ್ರವೇಶ ಪತ್ರ ಪರಿಶೀಲಿಸಲು ಪೋಷಕರಿಗೆ ಸಲಹೆ ನೀಡಲಾಗುತ್ತದೆ. ಈ ಮಾರ್ಗಸೂಚಿಗಳ ಆಧಾರದ ಮೇಲೆ ಮಾತ್ರ ಪರೀಕ್ಷೆಯಲ್ಲಿ ಕಾಣಿಸಿಕೊಳ್ಳಬೇಕಾಗುತ್ತದೆ. ಪ್ರವೇಶ ಪರೀಕ್ಷೆಯನ್ನು ನ.4, 2023 ರಂದು ನಡೆಸಲಾಗುವುದು. ಬೆಳಗ್ಗೆ 11:30 ರಿಂದ ಮಧ್ಯಾಹ್ನ 1:30 ರವರೆಗೆ ಒಂದೇ ಸೆಷನ್ನಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ.