HEALTH TIPS

600 ಡ್ರೋನ್‌ಗಳನ್ನು ಬಳಸಿ ಆಗಸದಲ್ಲಿ ರಾವಣ ದಹನ: ದೇಶದಲ್ಲಿ ಇದೇ ಮೊದಲು

            ಕೋಲ್ಕತ್ತ: ಈ ವರ್ಷ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತದ ಜನಪ್ರಿಯ ದುರ್ಗಾಪೂಜಾ ಸ್ಥಳವೊಂದರಲ್ಲಿ ರಾವಣ ದಹನ ಪ್ರದರ್ಶನವನ್ನು 600 ಡ್ರೋನ್‌ಗಳ ಸಮೂಹದಿಂದ ಗಾಳಿಯಲ್ಲಿ ಪ್ರದರ್ಶಿಸಲಾಯಿತು. ಡ್ರೋನ್‌ಗಳು ಶುಭೋ ಬಿಜೋಯ ಶುಭಾಶಯಗಳನ್ನು ಕೋರಿದವು. ಈ ಪ್ರಸಂಗ ಸುತ್ತಮುತ್ತಲಿನ ಜನರನ್ನು ಮಂತ್ರಮುಗ್ಧರನ್ನಾಗಿಸಿತು.

            ವಿಜಯ ದಶಮಿಯಂದು ಸಂಜೆ ನಿಗದಿಯಾಗಿದ್ದ ಕಾರ್ಯಕ್ರಮವನ್ನು ಅನಿವಾರ್ಯ ಸಂದರ್ಭಗಳಿಂದ ಒಂದು ದಿನ ಮುಂದೂಡಿದ್ದರಿಂದ ಬುಧವಾರ ರಾತ್ರಿಗೆ ಕಾರ್ಯಕ್ರಮ ನಡೆಯಿತು.

ನಗರದ ಪ್ರಸಿದ್ಧ ಸಾರ್ವಜನಿಕ ಉದ್ಯಾನ ಪಾರ್ಕ್ ಸರ್ಕಸ್ ಮೈದಾನದಲ್ಲಿ ಪ್ರದರ್ಶನ ನಡೆಯಿತು. ಅಚ್ಚುಕಟ್ಟಾಗಿ ಸಾಲುಗಳಲ್ಲಿ ನೆಲದ ಮೇಲೆ ನಿಂತಿದ್ದ ಡ್ರೋನ್‌ಗಳು ಒಮ್ಮಲೆ ಆಗಸಕ್ಕೆ ಹಾರಿದವು.         ನಂತರ ಗಾಳಿಯಲ್ಲಿ ವಿಭಿನ್ನ ಮಾದರಿಗಳನ್ನು ರಚಿಸಿದವು. ಶುಭೋ ಬಿಜೋಯ ಸಂದೇಶ, ದುರ್ಗಾ ದೇವಿ, ಭಗವಾನ್ ರಾಮ ಮತ್ತು ರಾವಣ ಮುಂತಾದ ವಿಭಿನ್ನ ದೃಶ್ಯ ವೈಭವ ಕಣ್ಮನ ಸೆಳೆಯಿತು.

ಇಂತಹ ತಂತ್ರಜ್ಞಾನ ಬೆಂಬಲಿತ ರಾವಣ ದಹನ ದೇಶದಲ್ಲಿ ಮೊದಲ ಬಾರಿಗೆ ನಡೆದಿದೆ ಎಂದು ಪಾರ್ಕ್ ಸರ್ಕಸ್ ಸರ್ಬೋಜನಿನ್ ದುರ್ಗೋತ್ಸಾಬ್ (ಉದ್ದಿಪಾನಿ) ಸಮಿತಿಯ ಅಧ್ಯಕ್ಷ ಗೌರವ್ ಬಹ್ರಿ ಧವನ್ ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದ್ದಾರೆ.

            ದುರ್ಗಾ ಪೂಜೆಯ ಶುಭಾಶಯಗಳು, ರಾವಣ ದಹನ, ರಾಜ್ಯ ಮತ್ತು ರಾಷ್ಟ್ರಕ್ಕಾಗಿ ಸಂದೇಶಗಳನ್ನು ಈ ಡ್ರೋನ್‌ಗಳು ಪ್ರದರ್ಶಿಸಿದವು.

               'ನನ್ನ ಸಹೋದರ ಅರ್ಜುನ್, ಚೀನಾಕ್ಕೆ ಭೇಟಿ ನೀಡಿದಾಗ, ಹಬ್ಬಗಳಲ್ಲಿ ಡ್ರೋನ್‌ಗಳನ್ನು ಹೇಗೆ ಬಳಸಲಾಗುತ್ತಿದೆ ಎಂಬುದನ್ನು ನೋಡಿದ್ದರು. ಅದೇ ರೀತಿ ನಾವು ಏಕೆ ಮಾಡಬಾರದು ಎಂದು ಸುಮಾರು ಆರು ತಿಂಗಳ ಹಿಂದೆ ಸಂಶೋಧನೆ ಆರಂಭಿಸಿದ್ದೆವು. ಇದರ ಯಶಸ್ಸಿಗೆ ಸಹಕರಿಸಿದ ಪೂರ್ವ ಕಮಾಂಡ್‌ಗೆ ಕೃತಜ್ಞರಾಗಿರುತ್ತೇವೆ. ಅಲ್ಲದೆ, ಡ್ರೋನ್ ಸೇವೆ ಒದಗಿಸಿದ ಕಂಪನಿಯು ಎಲ್ಲ ಅನುಮೋದನೆಗಳನ್ನು ಪಡೆದಿತ್ತು' ಎಂದು ಧವನ್ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries