ಪಟ್ನಾ: ಬಿಹಾರ ಸರ್ಕಾರವು ನಡೆಸಿದ್ದ ಜಾತಿವಾರು ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಇದರನ್ವಯ ಬಿಹಾರದಲ್ಲಿ ಇತರೆ ಹಿಂದುಳಿದ ವರ್ಗಗಳ(ಒಬಿಸಿ) ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ(ಇಬಿಸಿ) ಜನರು ಶೇಕಡ 63ರಷ್ಟು ಇದ್ದಾರೆ.
ಪಟ್ನಾ: ಬಿಹಾರ ಸರ್ಕಾರವು ನಡೆಸಿದ್ದ ಜಾತಿವಾರು ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಇದರನ್ವಯ ಬಿಹಾರದಲ್ಲಿ ಇತರೆ ಹಿಂದುಳಿದ ವರ್ಗಗಳ(ಒಬಿಸಿ) ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ(ಇಬಿಸಿ) ಜನರು ಶೇಕಡ 63ರಷ್ಟು ಇದ್ದಾರೆ.
ಒಬಿಸಿಯಲ್ಲಿ ಬರುವ ಯಾದವ ಸಮುದಾಯದ ಜನಸಂಖ್ಯೆ ಅತಿ ಹೆಚ್ಚಾಗಿದ್ದು, ಒಟ್ಟು ಶೇಕಡ 14.27ರಷ್ಟು ಯಾದವ ಸಮುದಾಯದ ಜನರು ಬಿಹಾರದಲ್ಲಿದ್ದಾರೆ. ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಸಹ ಇದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಗಮನಾರ್ಹವೆಂದರೆ, ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜನಗಣತಿಯ ಭಾಗವಾಗಿ ಎಸ್‌ಸಿ ಮತ್ತು ಎಸ್‌ಟಿ ಹೊರತುಪಡಿಸಿ ಇತರೆ ಜಾತಿಗಳ ಎಣಿಕೆ ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ಬಿಹಾರ ಸರ್ಕಾರವು ಜಾತಿವಾರು ಸಮೀಕ್ಷೆಗೆ ಆದೇಶಿಸಿತ್ತು.
ಬಿಹಾರದ ಒಟ್ಟು ಜನಸಂಖ್ಯೆ: 13,07,25,310 ಒಬಿಸಿ: 3.54 ಕೋಟಿ -- 27.12% ಇಬಿಸಿ: 4.70 ಕೋಟಿ -- 36.01% ಎಸ್‌ಸಿ: 2.56 ಕೋಟಿ-- 19.65% ಎಸ್‌ಟಿ: 21.99 ಲಕ್ಷ -- 1,68% ಸಾಮಾನ್ಯ ವರ್ಗ: 2.02 ಕೋಟಿ -- 15.52%ಬಿಹಾರದ ಜಾತಿವಾರು ಜನಸಂಖ್ಯೆ ಸಮೀಕ್ಷೆಹಿಂದೂ: 10.71 ಕೋಟಿ -- 81.99% ಇಸ್ಲಾಂ: 23.14 ಲಕ್ಷ -- 17.70% ಕ್ರಿಶ್ಚಿಯನ್: 75238 -- 0.05% ಸಿಖ್: 14753 -- 0.01% ಬೌದ್ಧರು: 1.11 ಲಕ್ಷ -- 0.08% ಜೈನ್: 12523 -- 0.009% ಇತರೆ: 1.66 ಕೋಟಿ -- 0.12%ಧರ್ಮವಾರು ಜನಸಂಖ್ಯೆ