ಬೀರತ್: ಇಸ್ರೇಲ್ ಕಡೆಯಿಂದ ಲೆಬನಾನ್‌ಗೆ ಹಾರಿದ ಕ್ಷಿಪಣಿಗಳು ಪತ್ರಕರ್ತನ ಹತ್ಯೆಗೆ ಕಾರಣವಾಗಿವೆ. ಇದೇ ಪ್ರಕರಣದಲ್ಲಿ ಆರು ಪತ್ರಕರ್ತರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಶುಕ್ರವಾರ ದಕ್ಷಿಣ ಲೆಬನಾನ್‌ನಲ್ಲಿ ರಾಯಿಟರ್ಸ್ ಪತ್ರಕರ್ತ ಇಸಾಮ್ ಅಬ್ದುಲ್ಲಾ ಕೊಲ್ಲಲ್ಪಟ್ಟಿದ್ದಾರೆ. ಇತರ ಆರು ಪತ್ರಕರ್ತರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಶುಕ್ರವಾರ ದಕ್ಷಿಣ ಲೆಬನಾನ್‌ನಲ್ಲಿ ರಾಯಿಟರ್ಸ್ ಪತ್ರಕರ್ತ ಇಸಾಮ್ ಅಬ್ದುಲ್ಲಾ ಕೊಲ್ಲಲ್ಪಟ್ಟಿದ್ದಾರೆ. ಇತರ ಆರು ಪತ್ರಕರ್ತರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಇಸ್ರೇಲ್ ಕ್ಷಿಪಣಿ ದಾಳಿಯಲ್ಲಿ ರಾಯಿಟರ್ಸ್ ವಿಡಿಯೊ ಜರ್ನಲಿಸ್ಟ್ ಅಬ್ದುಲ್ಲಾ ಸಾವನ್ನಪ್ಪಿದ್ದಾರೆ. ಅಲ್ ಜಜೀರಾ ಮತ್ತು ಏಜೆನ್ಸ್ ಫ್ರಾನ್ಸ್-ಪ್ರೆಸ್ ಸಂಸ್ಥೆಯ ಪತ್ರಕರ್ತರು ಸೇರಿದಂತೆ ಆರು ಜನರು ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಆರು ಜನರನ್ನು ಆಂಬ್ಯುಲೆನ್ಸ್‌ಗಳಲ್ಲಿ ಆಸ್ಪತ್ರೆಗಳಿಗೆ ರವಾನಿಸಲಾಯಿಗೆ ಎಂದು ರಾಯಿಟರ್ಸ್ ಹೇಳಿದೆ.
ಪತ್ರಕರ್ತರ ಗುಂಪು ಇಸ್ರೇಲ್ ಗಡಿಗೆ ಸಮೀಪವಿರುವ ಅಲ್ಮಾ ಅಲ್-ಶಾಬ್ ಬಳಿ ಕಾರ್ಯನಿರ್ವಹಿಸುತ್ತಿತ್ತು. ಅಲ್ಲಿ ಇಸ್ರೇಲಿ ಮಿಲಿಟರಿ ಮತ್ತು ಲೆಬನಾನಿನ ಮಿಲಿಷಿಯಾ ಹಿಜ್ಬುಲ್ಲಾ ಘರ್ಷಣೆಯಲ್ಲಿ ತೊಡಗಿಕೊಂಡಿವೆ ಎಂದು ತಿಳಿದುಬಂದಿದೆ.