ಸಾರಿಗೆ ಒಗ್ಗರಣೆ ಹಾಕುವಾಗ ಒಂದು 5-6 ಎಲೆ ಕರಿಬೇವು ಹಾಕಿದರೆ ಆಹಾ .... ಸಾರಿನ ಘಮ್ಮೆನ್ನುವ ಸುವಾಸನೆ ಜೊತೆಗೆ ಸ್ವಾದಿಷ್ಠವಾಗಿರುತ್ತದೆ ಅಲ್ವಾ? ಆದರೆ ಈ ಕರಿಬೇವು ಬರೀ ಅಡುಗೆ ರುಚಿ ಹೆಚ್ಚಿಸುವುದು ಮಾತ್ರವಲ್ಲ ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಈ ಕಾರಣದಿಂದಾಗಿ ಕರಿಬೇವು ಬಳಸುತ್ತೇವೆ. ಅದರಲ್ಲೂ ಈ ಕೆಳಗಿನ ಆರೋಗ್ಯ ಸಮಸ್ಯೆ ಇರುವವರು ಸ್ವಲ್ಪ ಕರಿಬೇವು ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ತಿಂದು ನೋಡಿ ಒಳ್ಳೆಯ ರಿಸಲ್ಟ್ ಕಾಣಬಹುದು.
ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ
ರಕ್ತದೊತ್ತಡ ನಿಯಂತ್ರಣದಲ್ಲಿ ಇಡುವಲ್ಲಿ ಕರಿಬೇವು ತುಂಬಾನೇ ಪ್ರಯೋಜನಕಾರಿ. ಕರಿಬೇವಿನಲ್ಲಿ ಪೊಟಾಷ್ಯಿಯಂ ಇದ್ದು ಅತ್ಯಧಿಕ ರಕ್ತದೊತ್ತಡ ನಿಯಂತ್ರಿಸುವಲ್ಲಿ ತುಂಬಾನೇ ಸಹಕಾರಿಯಾಗಿದೆ. ಪ್ರತಿನಿತ್ಯ ಸ್ವಲ್ಪ ಕರಿಬೇವು ತಿಂದು ನೋಡಿ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.
ಒಬೆಸಿಟಿ ಸಮಸ್ಯೆ
ನಮ್ಮ ಜೀವನಶೈಲಿಯಿಂದಾಗಿ ಒಬೆಸಿಟಿ ಸಮಸ್ಯೆ ಹೆಚ್ಚಾಗುತ್ತಿದೆ. ಒಬೆಸಿಟಿ ನಿಯಂತ್ರಿಸುವಲ್ಲಿಯೂ ಕರಿಬೇವು ತುಂಬಾನೇ ಸಹಕಾರಿ. ಬೆಳಗ್ಗೆ ವ್ಯಾಯಾಮ ಪ್ರಾರಂಭಿಸುವ ಮುನ್ನ ಸ್ವಲ್ಪ ಕರಿಬೇವು ಜಗಿದು ಅದರ ರಸ ನುಂಗಿ, ನಂತರ ಅರ್ಧ ಗಂಟೆ ವರ್ಕೌಟ್ ಮಾಡಿ. ಕೆಲವೇ ದಿನಗಳಲ್ಲಿ ನಿಮ್ಮ ಮೈ ತೂಕದಲ್ಲಿ ತುಂಬಾನೇ ವ್ಯತ್ಯಾಸ ಕಂಡು ಬರುವುದು.
ಮಧುಮೇಹ ನಿಯಂತ್ರಿಸುತ್ತದೆ
ಮಧುಮೇಹ ನಿಯಂತ್ರಿಸಲು ಕೂಡ ಇದು ತುಂಬಾನೇ ಪ್ರಯೋಜನಕಾರಿ. ಇದು ಇನ್ಸುಲಿನ್ ಉತ್ಪತ್ತಿ ಹೆಚ್ಚಿಸಿ ಸಕ್ಕರೆಯಂಶ ಕಡಿಮೆ ಮಾಡುತ್ತದೆ. ಮಧುಮೇಹ ಸಮಸ್ಯೆವಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವುದು, ಹೃದಯದ ಆರೋಗ್ಯಕ್ಕೂ ಒಳ್ಳೆಯದಲ್ಲ. ಆದ್ದರಿಂದ ಸಕ್ಕರೆಯಂಶ ನಿಯಂತ್ರಣದಲ್ಲಿಡುವುದು ಅವಶ್ಯಕವಾಗಿದೆ.
ಉರಿಯೂತದ ಸಮಸ್ಯೆ ಕಡಿಮೆಯಾಗುವುದು
ಕೆಲವರಿಗೆ ಉರಿಯೂತದ ಸಮಸ್ಯೆ ಇರುತ್ತದೆ. ಇದರಿಂದ ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಕರಿಬೇವಿನ ಎಲೆ ಒಟ್ಟು ಮೊತ್ತದ ಆರೋಗ್ಯಕ್ಕೆ ಒಳ್ಳೆಯದು.
ಕೂದಲಿಗೂ ಒಳ್ಳೆಯದು
ಕುದಲು ಉದುರುವ ಸಮಸ್ಯೆ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಈ ಕರಿಬೇವು ಕೂದಲಿನ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಆದ್ದರಿಂದ ತಲೆಗೆ ಹಾಕುವ ಎಣ್ಣೆಗೆ ಕೆಲವರು ಕರಿಬೇವು ಹಾಕಿ ಕೂಡ ಬಳಸುತ್ತಾರೆ.
ಇದರ ಅಡ್ಡಪರಿಣಾಮವೇನು?
3-4 ಎಲೆ ತಿಂದರೆ ಯಾವುದೇ ತೊಂದರೆಯಿಲ್ಲ. ಅಧಿಕ ತಿನ್ನಬೇಡಿ. ಅಧಿಕ ತಿಂದರೆ ಹೊಟ್ಟೆ ಹಾಳಾಗಬಹುದು
* ಅಲರ್ಜಿ ಉಂಟಾಗಬಹುದು
* ದೇಹದಲ್ಲಿ ಸಕ್ಕರೆಯಂಶ ತುಂಬಾನೇ ಕಡಿಮೆಯಾಗುವುದು.