ಕೊಲ್ಲಂ: ಅಮೃತಪುರಿ ಮಾತಾ ಅಮೃತಾನಂದಮಯಿ ದೇವಿಯ 70ನೇ ಜನ್ಮದಿನಾಚರಣೆ ನಿನ್ನೆ ನಡೆಯಿತು. ಅಮೃತ ವಿಶ್ವ ವಿದ್ಯಾಪೀಠದ ಆವರಣದಲ್ಲಿ ಸಿದ್ಧಪಡಿಸಲಾದ ವಿಶೇಷ ವೇದಿಕೆಯಲ್ಲಿ ನಿನ್ನೆ ಸಂಜೆ ಸಂಭ್ರಮಾಚರಣೆ ಆರಂಭವಾಯಿತು.
ಕರೋನಾದಿಂದಾಗಿ, ಕಳೆದ 3 ವರ್ಷಗಳಿಂದ ವಿಸ್ತಾರವಾದ ಆಚರಣೆಯನ್ನು ನಿಷೇಧಿಸಲಾಗಿತ್ತು. ಹಾಗಾಗಿ ಪ್ರಪಂಚದ ವಿವಿಧ ಭಾಗಗಳಿಂದ ಮಾತಾ ಅಮೃತಾನಂದಮಯಿಯ ಅನೇಕ ಭಕ್ತರು ಜನ್ಮದಿನ ಆಚರಣೆಗೆ ಈ ಬಾರಿ ಆಗಮಿಸಿದ್ದಾರೆ. ಅವರ ಜನ್ಮದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ಆಚರಿಸಲಾಗುತ್ತದೆ, ಆದರೆ ಈ ಬಾರಿ ಅದು ಅವರ ಜನ್ಮ ನಕ್ಷತ್ರವಾದ ಕಾರ್ತಿಕ ದಿನದಂದು ಆಚರಿಸಲಾಗಿದೆ.
ಅಮೃತ ವಿದ್ಯಾಪೀಠದಲ್ಲಿ ವಿಶೇಷವಾಗಿ ಸಿದ್ಧಪಡಿಸಿದ್ದ ವೇದಿಕೆಗೆ ಮಾತಾ ಅಮೃತಾನಂದಮಯಿ ಆಗಮಿಸಿದಾಗ ಭಕ್ತರು ಭಕ್ತಿಭಾವ ಮೆರೆದರು. ಈ ವೇಳೆ ಮಾತಾ ಅಮೃತಾನಂದಮಯಿ ನೀಡಿದ ಸಂದೇಶಗಳಿಗಾಗಿ ಭಕ್ತರು ಕಾಯುತ್ತಿದ್ದರು. ಸಮಾರಂಭದಲ್ಲಿ ಅಮೃತ ವೈದ್ಯಕೀಯ ಸಂಸ್ಥೆ ಸೇರಿದಂತೆ ಹೊಸ ಉಪಕ್ರಮಗಳ ಘೋಷಣೆಗಳು ಮತ್ತು ಪುಸ್ತಕ ಬಿಡುಗಡೆಗಳು ನಡೆದವು. ಅಮ್ಮನ ಜನ್ಮದಿನವಾದ ಇಂದು ಬೆಳಗ್ಗೆಯಿಂದ ವಿವಿಧ ಕಾರ್ಯಕ್ರಮಗಳು ನಡೆಯಿತು. ಸಾಂಸ್ಕøತಿಕ ಸಮ್ಮೇಳನದಲ್ಲಿ 193 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ರಾಜ್ಯಪಾಲರು, ಕೇಂದ್ರ ಸಚಿವ ಮಹೇಂದ್ರನಾಥ್ ಪಾಂಡೆ, ಕೇಂದ್ರ ಸಹಾಯಕ ಸಚಿವರಾದ ಅಶ್ವಿನಿ ಕುಮಾರ್ ಚೌ ಬೇ, ವಿ ಮುರಳೀಧರನ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಉತ್ಸವದಲ್ಲಿ ವಿಶ್ವದ 70 ಪ್ರಮುಖ ವ್ಯಕ್ತಿಗಳ ಜನ್ಮದಿನದ ಶುಭಾಶಯಗಳನ್ನು ಪ್ರದರ್ಶಿಸಲಾಗುತ್ತದೆ.