HEALTH TIPS

ವೀಲ್‌ಚೇರ್‌ ಮೇಲೆ ಕುಳಿತು ಗರ್ಬಾ ನೃತ್ಯ ಮಾಡಿದ 700ಕ್ಕೂ ಹೆಚ್ಚು ವಿಶೇಷಚೇತನರು

              ಹಮದಾಬಾದ್‌: ಆದಿಶಕ್ತಿಯ ಹಬ್ಬವಾದ ನವರಾತ್ರಿಯನ್ನು ದೇಶದಾದ್ಯಂತ ಭಕ್ತಿ ಭಾವದಿಂದ ಆಚರಿಸಲಾಗುತ್ತಿದೆ. ಈ ನಡುವೆ ಅಹಮದಾಬಾದ್‌ನಲ್ಲಿ ದಿವ್ಯಾಂಗ್‌ ನವರಾತ್ರಿ ಮಹೋತ್ಸವದಲ್ಲಿ ವಿಶೇಷಚೇತನರನ್ನು ಪ್ರೋತ್ಸಾಹಿಸಲು ಗರ್ಬಾ ಫೆಸ್ಟ್ ಅನ್ನು ಆಯೋಜಿಸಲಾಗಿದೆ.

             ಈ ಕಾರ್ಯಕ್ರಮದಲ್ಲಿ 700ಕ್ಕೂ ಹೆಚ್ಚು ವಿಶೇಷ ಚೇತನರು ಗಾಲಿಕುರ್ಚಿಗಳ(ವೀಲ್‌ಚೇರ್‌)ಮೇಲೆ ಕುಳಿತು ನೃತ್ಯ ಗರ್ಬಾ ಮಾಡಿದ್ದಾರೆ.


           ಇವರೊಂದಿಗೆ ಹಿರಿಯರು, ಯುವಕರು ಕೂಡ ಸೇರಿಕೊಂಡಿದ್ದಾರೆ. ಇದರ ವಿಡಿಯೊವನ್ನು ಎಎನ್‌ಐ ಸಂಸ್ಥೆ ಎಕ್ಸ್‌ನಲ್ಲಿ ಹಂಚಿಕೊಂಡಿದೆ.

         ವಿಪುಲ್ಬಾಯ್‌ ಎನ್ನುವವರು ಈ ಕಾರ್ಯಕ್ರಮವನ್ನು ಕಳೆದ ಆರು ವರ್ಷಗಳಿಂದ ನಡೆಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, 'ನಾನು ಸುಮಾರು ಒಂದು ದಶಕದ ಹಿಂದೆ ಮೈದಾನದಲ್ಲಿ ನನ್ನ ಸ್ನೇಹಿತರೊಂದಿಗೆ ಗರ್ಬಾ ಆಡುತ್ತಿದ್ದಾಗ ಸ್ಥಳದಲ್ಲಿ ವಿಶೇಷಚೇತನ ವ್ಯಕ್ತಿಯನ್ನು ಕಂಡೆ. ಅವರನ್ನು ನೋಡಿ ಭಾವುಕನಾದೆ. ಅವರಿಗಾಗಿ ಗರ್ಬಾವನ್ನು ಆಯೋಜಿಸಲು ಆ ದಿನವೇ ನಿರ್ಧರಿಸಿದೆ. ಆರು ವರ್ಷಗಳಿಂದ ಅದು ನಡೆದುಕೊಂಡು ಬರುತ್ತಿದೆ. ಇಂದು ಗರ್ಬಾ ಆಡಲು ಗುಜರಾತ್ ಮತ್ತು ಸುತ್ತಮುತ್ತಲಿನ ಸುಮಾರು 700 ವಿಶೇಷಚೇತನರು ಇಲ್ಲಿ ಸೇರಿದ್ದರು' ಎಂದು ಖುಷಿ ಹಂಚಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries