HEALTH TIPS

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತಕ್ಕೆ73 ಪದಕ: ಕ್ರೀಡಾಪಟುಗಳ ಬದ್ಧತೆ, ದೃಢತೆ ಕೊಂಡಾಡಿದ ಪ್ರಧಾನಿ ಮೋದಿ

            ನವದೆಹಲಿ: ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತೀಯ ಪ್ಯಾರಾ ಅಥ್ಲೀಟ್‌ಗಳು ಮಾಡುತ್ತಿರುವ ಸಾಧನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಶ್ಲಾಘಿಸಿದ್ದಾರೆ.

              ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿರುವ ಮೋದಿಯವರು, ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಇದೊಂದು ಸ್ಮರಣೀಯ ಸಾಧನೆ, ಭಾರತವು ಅಭೂತಪೂರ್ವ 73 ಪದಕಗಳನ್ನು ಪಡೆದುಕೊಂಡಿದೆ ಮತ್ತು ಇನ್ನೂ ಪ್ರಬಲವಾಗಿ ಮುನ್ನಡೆಯುತ್ತಿದೆ, ಜಕಾರ್ತಾ 2018 ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 72 ಪದಕಗಳ ನಮ್ಮ ಹಿಂದಿನ ದಾಖಲೆಯನ್ನು ಮುರಿದಿದೆ. ಈ ಮಹತ್ವದ ಸಂದರ್ಭವು ನಮ್ಮ ಕ್ರೀಡಾಪಟುಗಳ ಅಚಲ ನಿರ್ಣಯವನ್ನು ಸಾಕಾರಗೊಳಿಸುತ್ತದೆ ಎಂದು ಹೇಳಿದ್ದಾರೆ.


               ಅಲ್ಲದೇ, ಪ್ರತಿಯೊಬ್ಬ ಭಾರತೀಯ ಹೃದಯದಲ್ಲಿ ಅಪಾರ ಸಂತೋಷವನ್ನು ತುಂಬುವ ಮೂಲಕ ಇತಿಹಾಸದಲ್ಲಿ ತಮ್ಮ ಹೆಸರನ್ನು ಕೆತ್ತಿರುವ ನಮ್ಮ ಅಸಾಧಾರಣ ಪ್ಯಾರಾ-ಕ್ರೀಡಾಪಟುಗಳನ್ನು ಶ್ಲಾಘಿಸುತ್ತೇನೆ. ಕ್ರೀಡಾಪಟುಗಳ ಬದ್ಧತೆ, ದೃಢತೆ ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ಈ ಸಾಧನೆಯು ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುವ ಬೆಳಕಿನಂತೆ ಕಾರ್ಯನಿರ್ವಹಿಸಲಿ ಎಂದು ಆಶಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries