HEALTH TIPS

ಒಟಿಟಿಯಲ್ಲಿ ಕನ್ನಡ ಸೇರಿ 7ಭಾಷೆಗಳಲ್ಲಿ ಬರಲಿದೆ ನಿತ್ಯಾಮೆನನ್​ 'ಮಾಸ್ಟರ್​ ಪೀಸ್​'

               ತಿರುವನಂತಪುರಂ: ದಕ್ಷಿಣ ಭಾರತದ ಸ್ಟಾರ್​ ಹೀರೋಯಿನ್​ ಆಗಿ ಗುರ್ತಿಸಿಕೊಂಡಿರುವ ನಿತ್ಯಾಮೆನನ್​ ಓಟಿಟಿಗಳ ಮೇಲೆಯೇ ದೃಷ್ಟಿ ನೆಟ್ಟಂತಿದೆ. ಬ್ರೀತ್​ ಎಂಬ ಥ್ರಿಲ್ಲರ್​ ವೆಬ್​ ಸೀರೀಸ್​ ಮೂಲಕ ಓಟಿಟಿಗೆ ಎಂಟ್ರಿಕೊಟ್ಟ ನಿತ್ಯಾ ಒಂದರ ಮೇಲೊಂದರಂತೆ ಸಿನಿಮಾಗಳನ್ನು ಮಾಡುತ್ತಿದ್ದಾಳೆ.

              ಈ ಹೀರೋಯಿನ್​ ಇತ್ತೀಚೆಗೆ ಪ್ರಧಾನ ಪಾತ್ರದಲ್ಲಿ ನಟಿಸಿದ ವೆಬ್​ ಸೀರೀಸ್​ `ಶ್ರೀಮತಿ ಕುಮಾರಿ'. ಈ ಸೀರೀಸ್​ ಸೆ.28ರಿಂದ ಅಮೆಜಾನ್​ ಪ್ರೈಂನಲ್ಲಿ ಸ್ಟ್ರಿಮ್ಮಿಂಗ್​ ಆಗುತ್ತಿದೆ. ಈ ಸೀರೀಸ್​ಗೆ ಡಿಜಿಟಲ್​ ಪ್ಲಾಟ್​ ಫಾಮ್​ನಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದೆ. ಶೀಘ್ರದಲ್ಲೇ ಆಕೆ ಪ್ರಧಾನ ಪಾತ್ರದಲ್ಲಿ ನಟಿಸಿರುವ ಮತ್ತೊಂದು ವೆಬ್​ ಸೀರೀಸ್​ ನಿಂದ ಆಸಕ್ತಿಕರ ಅಪ್​ಡೇಟ್​ ಹೊರಬಿದ್ದಿದೆ.

                 ನಿತ್ಯಾ ಹೀರೋಯಿನ್​ ಆಗಿ ನಟಿಸಿದ ಮಲಯಾಳಂ ವೆಬ್​ ಸೀರೀಸ್​ ಟ್ರೈಲರ್​ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದರ ಜತೆಗೆ ಸ್ಟ್ರೀಮಿಂಗ್​ ಡೇಟ್​ ಸಹ ಪ್ರಕಟಿಸಲಾಗಿತ್ತು. ಈ ಮಾಸ್ಟರ್​ ಪೀಸ್​ ಹಾಟ್​ ಸ್ಟಾರ್​ನಲ್ಲಿ ಅ.25ರಿಂದ ಬರಲಿದ್ದು, ಈ ಸಂದರ್ಭ ಟ್ರೈಲರ್​ ಸಹ ಬಿಡುಗಡೆ ಮಾಡಲಾಯಿತು. ಇದರಲ್ಲಿ ರಿಯಾ ಎಂಬ ಪಾತ್ರದಲ್ಲಿ ನಿತ್ಯಾ ಕಾಣಿಸಿಕೊಂಡಿದ್ದಾರೆ. ತುಂಬಾ ಕಾಮಿಡಿಯಾಗಿರುವ ಟ್ರೈಲರ್​ ನೋಡುತ್ತಿದ್ದರೆ ಮನರಂಜನೆ ಸಿಗುವುದು ಗ್ಯಾರಂಟಿ ಎಂಬಂತಾಗಿದೆ. ಆದರೆ ನಿತ್ಯಾಗೆ ಒದಗಿಸಿರುವ ಡಬ್ಬಿಂಗ್​ ವಾಯ್ಸ್​ ಆಕೆಗೆ ಇಷ್ಟವಾಗಲಿಲ್ಲವಂತೆ. ಎನ್​.ಶ್ರೀಜಿತ್​ ನಿರದೇಶಕತ್ವದ ಈ ಸೀರೀಸ್​ ಮಲೆಯಾಳಂ, ಕನ್ನಡ, ತಮಿಳು, ತೆಲುಗು, ಬಂಗಾಳಿ, ಮರಾಠಿ, ಹಿಂದಿ ಭಾಷೆಗಳಲ್ಲಿ ಬರಲಿರುವುದು ವಿಶೇಷ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries