ಮಂಜೇಶ್ವರ: ಮಂಜೇಶ್ವರ ಕ್ಷೇತ್ರದ ಎಂಟು ಗ್ರಾಮೀಣ ರಸ್ತೆಗಳ ಪುನಶ್ಚೇತನಕ್ಕೆ 80 ಲಕ್ಷ ರೂ.ಗಳನ್ನು ಮಂಜೂರು ಮಾಡಿ ಆಡಳಿತಾತ್ಮಕ ಅನುಮತಿ ಪಡೆಯಲಾಗಿದೆ ಎಂದು ಶಾಸಕ ಎ.ಕೆ.ಎಂ.ಅಶ್ರಫ್ ಮಾಹಿತಿ ನೀಡಿರುವರು. ದಿನಾರ್ - ಗುತ್ತು ರಸ್ತೆ 10 ಲಕ್ಷ (ಮಂಗಲ್ಪಾಡಿ ಗ್ರಾಮ ಪಂಚಾಯತಿ), ದೈಗೋಳಿ - ಬೋರ್ಕಳ ಮಿಯಾಪದವು ರಸ್ತೆ 10 ಲಕ್ಷ (ಮೀಂಜ ಗ್ರಾಮ ಪಂಚಾಯತಿ), ದುರ್ಗಿಪಳ್ಳ - ಕನಿಲ ರಸ್ತೆ 10 ಲಕ್ಷ (ಮಂಜೇಶ್ವರ ಗ್ರಾಮ ಪಂಚಾಯತಿ), ಚೆಮ್ಮನಕೋಡ್ ರಸ್ತೆ 10 ಲಕ್ಷ (ಕುಂಬಳೆ ಗ್ರಾಮ ಪಂಚಾಯತಿ), ಕಟಮಜಲು-ಮಲಾರ್ ರಸ್ತೆ 10 ಲಕ್ಷ (ವರ್ಕಾಡಿ ಗ್ರಾಮ ಪಂಚಾಯಿತಿ), ಧರ್ಮತ್ತಡ್ಕ- ಚಳ್ಳಂಗಯ ರಸ್ತೆ 10 ಲಕ್ಷ (ಪುತ್ತಿಗೆ ಗ್ರಾಮ ಪಂಚಾಯಿತಿ), ಕಾಯರ್ಕಟ್ಟೆ- ನೂತಿಲ್ ರಸ್ತೆ 10 ಲಕ್ಷ (ಪೈವಳಿಕೆ ಗ್ರಾಮ ಪಂಚಾಯಿತಿ), ಉಕ್ಕಿನಡ್ಕ-ಕುದ್ವ ರಸ್ತೆ 10 ಲಕ್ಷ (ಎಣ್ಮಕಜೆ ಗ್ರಾ.ಪಂ.)ಎಂಬಂತೆ ನಿಧಿ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ತಕ್ಷಣ ಪೂರ್ಣಗೊಳ್ಳಲಿದೆ. ಆರಂಭಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕರು ಮಾಹಿತಿ ನೀಡಿರುವರು. ಗ್ರಾಮೀಣ ರಸ್ತೆಗಳನ್ನು ಪುನಶ್ಚೇತನಗೊಳಿಸುವ ಮೂಲಕ ಕ್ಷೇತ್ರವು ಅಭಿವೃದ್ಧಿಯತ್ತ ದಾಪುಗಾಲಿಡಲಿದೆ.