ತ್ರಿಶೂರ್ :ಇಂದಿನ ಯುವಪೀಳಿಗೆಗೆ ದುಬಾರಿ ಬೆಲೆ ಬಾಳುವ ಕಾರುಗಳು ಎಂದರೆ ಸಖತ್ ಕ್ರೇಜ್ ಇರುತ್ತದೆ. ಹೀಗೆ ವಾಹನಗಳ ಕುರಿತಾಗಿ ಕ್ರೇಜ್ ಹೊಂದಿರುವ ಯುವಕ ಮಾರುತಿ ಕಾರನ್ನು ರೋಲ್ಸ್ ರಾಯ್ಸ್ ಆಗಿ ಸಿದ್ಧಪಡಿಸಿದ್ದಾನೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಹಾದೀಫ್ ಮಾತನಾಡಿ, ಕಡಿಮೆ ಬೆಲೆಗೆ ತಮ್ಮ 800 ಕಾರನ್ನು ತೆಗೆದುಕೊಂಡಿದ್ದೆ. ರೋಲ್ಸ್ ರಾಯ್ಸ್ ಡಿಸೈನ್ ಮಾಡಿ ರೆಡಿ ಮಾಡಿದ್ದೇನೆ. ಹೆಡ್‌ಲೈಟ್ ಡೂಮ್ ಸೇರಿದಂತೆ ಕೆಲ ಕೆಲಸಗಳು ಬಾಕಿ ಇವೆ. ವಾಣಿಜ್ಯ ರೂಪದಲ್ಲಿ ನಾನು ಯಾವುದೇ ಆಲೋಚನೆ ಮಾಡಿಲ್ಲ ಎಂದಿದ್ದಾನೆ.
ತ್ರಿಶೂರ್ ಜಿಲ್ಲೆಯ ಕೊಡಂಗಲ್ಲೂರಿನ ನಿವಾಸಿಯಾಗಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿ ಹಾದೀಫ್ ಮಾರುತಿ ಸುಜುಕಿಯ ಹಳೇ 800 ಕಾರನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾne. ಹಳೇಯ 800 ಕಾರು ಖರೀದಿಸಿದ ಹಾದೀಫ್ ಈ ಕಾರಿನ ಬಾಡಿ ಹಾಗೂ ಎಂಜಿನ್ ಸಂಪೂರ್ಣವಾಗಿ ಬೇರ್ಪಡಿಸಿದ್ದಾನೆ. ಬಾಡಿ, ಇಂಟಿರಿಯರ್ ಸೇರಿದಂತೆ ಎಲ್ಲವನ್ನೂ ಹಾದೀಫ್ ಕೈಯಿಂದಲೇ ಮಾಡಿದ್ದಾನೆ. ಸೀಟು ಸೇರಿದಂತೆ ಎಲ್ಲವನ್ನೂ ರೋಲ್ಸ್ ರಾಯ್ಸ್ ಕಲ್ಲಿನಾನ್ ಮಾದರಿಯಲ್ಲಿ ನಿರ್ಮಾಣ ಮಾಡಿದ್ದಾನೆ. ಹಾದೀಫ್ ತನ್ನ ನೆಚ್ಚಿನ ರೋಲ್ಸ್ ರಾಯ್ಸ್ ಮಿನಿ ಕಲ್ಲಿನಾನ್ ಕಾರಿನ ಡಿಸೈನ್ ರೆಡಿ ಮಾಡಿದ್ದಾನೆ. ನಾಲ್ಕೈದು ತಿಂಗಳಿನಿಂದ ಸತತ ಪರಿಶ್ರಮ ಇದೀಗ ಫಲಕೊಟ್ಟಿದೆ. ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರಿನ ಆರಂಭಿಕ ಬೆಲೆ 6.95 ಕೋಟಿ ರೂಪಾಯಿ. ಇದೀಗ ಈ ದುಬಾರಿ ಕಾರನ್ನು ಕೇವಲ 45,000 ರೂಪಾಯಿಯಲ್ಲಿ ನಿರ್ಮಾಣ ಮಾಡಲಾಗಿದೆ.
ಸದ್ಯ ಈ ಕಾರಿನ ಸಂಪೂರ್ಣ ಕೆಲಸ ಮುಗಿದಿಲ್ಲ. ಇಷ್ಟೇ ಅಲ್ಲ ಈ ಕಾರನ್ನು ರಸ್ತೆಗಿಳಿಸುವ ಯಾವುದೇ ಅನುಮತಿ ಪತ್ರಗಳು ಇಲ್ಲ. ಆದರೆ ವಿದ್ಯಾರ್ಥಿಯ ಸಾಧನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.