ತಿರುವನಂತಪುರಂ: ರಾಜ್ಯದ ಎಲ್ಲಾ ವನ್ಯಜೀವಿಧಾಮಗಳಲ್ಲಿ ಇದೇ ತಿಂಗಳ 8ರವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಅವಕಾಶ ನೀಡಲಾಗಿದೆ. ವನ್ಯಜೀವಿ ಸಪ್ತಾಹದ ಆಚರಣೆಗಳ ಜೊತೆಯಲ್ಲಿ ಉಚಿತ ಪ್ರವೇಶ ವ್ಯವಸ್ಥೆ ಕಲ್ಪಿಸಲಾಗಿದೆ.
2023 ರ ವನ್ಯಜೀವಿ ಸಪ್ತಾಹದ ರಾಜ್ಯ ಮಟ್ಟದ ಉದ್ಘಾಟನೆಯು ತ್ರಿಶೂರ್‍ನ ಪುತ್ತೂರಲ್ಲಿರುವ ಝೂಲಾಜಿಕಲ್ ಪಾರ್ಕ್‍ನಲ್ಲಿ ನಡೆಯಿತು. ಅಕ್ಟೋಬರ್ 8 ರಂದು ಕೋಝಿಕ್ಕೋಡ್‍ನಲ್ಲಿ ವಾರದ ಆಚರಣೆಯ ಸಮಾರೋಪ ಅಧಿವೇಶನ ನಡೆಯಲಿದೆ.
ಇದೇ ವೇಳೆ ಪುತ್ತೂರು ಮೃಗಾಲಯಕ್ಕೆ ಪ್ರಾಣಿಗಳನ್ನು ಕರೆತರುವ ಕಾರ್ಯಕ್ರಮ ಇಂದು ನಡೆಯಿತು. ಇದರೊಂದಿಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ರಾಜ್ಯ ಮತ್ತು ಜಿಲ್ಲಾವಾರು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಇಂದಿನಿಂದ ತ್ರಿಶೂರಿನ ಉದ್ಯಾನವನದಿಂದ ಪುತ್ತೂರಿನ ಝೂಲಾಜಿಕಲ್ ಪಾರ್ಕ್‍ಗೆ ಪಕ್ಷಿಗಳನ್ನು ಸ್ಥಳಾಂತರಿಸಲಾಗಿದೆ. ಪ್ರಸ್ತುತ ತ್ರಿಶೂರ್‍ನಿಂದ ಪ್ರಾಣಿಗಳನ್ನು ತರಲು ಆರು ತಿಂಗಳು ಬೇಕಾಗುತ್ತದೆ. ಆದರೆ ನಾಲ್ಕು ತಿಂಗಳೊಳಗೆ ಪ್ರಾಣಿಗಳ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳಬಹುದು ಎನ್ನುತ್ತಾರೆ ಅಧಿಕಾರಿಗಳು.