HEALTH TIPS

9ತಿಂಗಳಲ್ಲಿ ಭಾರತೀಯರು ವಿದೇಶ ಪ್ರವಾಸಕ್ಕೆ ಮಾಡಿದ ಖರ್ಚು 10 ಶತಕೋಟಿ ಡಾಲರ್!

            ವದೆಹಲಿ: ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಸಾಗರೋತ್ತರ ಪ್ರಯಾಣಕ್ಕಾಗಿ ಭಾರತೀಯರು ದಾಖಲೆಯ $10 ಶತಕೋಟಿ ಖರ್ಚು ಮಾಡಿದ್ದಾರೆ ಇದು ಯಾವುದೇ ಪೂರ್ಣ ಹಣಕಾಸು ವರ್ಷಕ್ಕಿಂತ ಹೆಚ್ಚು ಎಂದು TOI(Total Operating Income) ತಿಳಿಸಿದೆ.

               ಈ ಹಿಂದೆ ಕರೋನಾ ಇದ್ದು, ಆಗ ಕಡಿಮೆ ಕರ್ಚು ಮಾಡಲಾಗಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಯಾವುದೇ ನಿರ್ಬಂಧವಿಲ್ಲದ ಕಾರಣ ಭಾರತೀಯರು ವಿದೇಶಿ ಪ್ರವಾಸಗಳಿಗಾಗಿ ಸುಮಾರು $10 ಶತಕೋಟಿ ಡಾಲರ್‌ ವ್ಯಯಿಸಿದ್ದಾರೆ. ಇದು ಯಾವುದೇ ಹಣಕಾಸಿನ ವರ್ಷಕ್ಕೆ ಹೋಲಿಸಿದರೂ ಅತಿ ಹೆಚ್ಚು ಖರ್ಚು ಮಾಡಿರುವುದು ಕಂಡುಬರುತ್ತದೆ. 2020 ರಲ್ಲಿ $7 ಶತಕೋಟಿ ಹಣವನ್ನು ಖರ್ಚು ಮಾಡಿದ್ದಾರೆ ಎಂದು ವಿವರಿಸಿದೆ.

                ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ಡಿಸೆಂಬರ್ 2022 ರಲ್ಲಿ ಭಾರತೀಯರು $1,137 ಮಿಲಿಯನ್ ಪ್ರಯಾಣಕ್ಕಾಗಿ ಖರ್ಚು ಮಾಡಿದ್ದರು. ಇದೇ 2022 ರ ಏಪ್ರಿಲ್ ಮತ್ತು ಡಿಸೆಂಬರ್ ನಡುವೆ $9,947 ಮಿಲಿಯನ್‌ ಆಗಿತ್ತು. 2022ಕ್ಕೆ ಹೋಲಿಸಿದರೆ 2023 ರಲ್ಲಿ ಪ್ರಯಾಣದ ಪಾಲು ಶೇ.35 ರಿಂದ ಶೇ.51 ಕ್ಕೆ ಏರಿತು, 2021ರಲ್ಲಿ ಕರೋನಾದಿಂದಾಗಿ ಶೇ.25 ಕ್ಕೆ ಇಳಿದಿತ್ತು ಎಂದು TOI ವರದಿ ಹೇಳಿದೆ.

                                     ಭಾರತೀಯರು ಎಲ್ಲಿಗೆ ಪ್ರಯಾಣಿಸುತ್ತಾರೆ?
             ವಿಯೆಟ್ನಾಂ, ದುಬೈ ಮತ್ತು ಬಾಲಿಯಂತಹ ದೇಶಗಳಿಗೆ ಭಾರತೀಯ ಕುಟುಂಬದ ಸಮೇತ ತೆರಳುತ್ತಾರೆ. ಇ-ವೀಸಾ ಪ್ರಕ್ರಿಯೆ ಮತ್ತು ಆತಿಥ್ಯ ಸುಗಮವಾಗಿರುವುದು ಇದಕ್ಕೆ ಕಾರಣ ಎಂದು ರೈಟ್ ಕನೆಕ್ಷನ್ಸ್‌ನ ನಿರ್ದೇಶಕಿ ರೇಖಾ ಮೆಲ್ವಾನಿ ಹೇಳಿದರು.

                ಇನ್ನು ಆರ್ಥಿಕ ಹಿಂಜರಿತದಿಂದ ಚೇತರಿಸಿಕೊಳ್ಳುತ್ತಿರುವ ಹಿಂದು ಮಹಾಸಾಗರದ ಶ್ರೀಲಂಕಾ ಮತ್ತೆ ಭಾರತೀಯರ ಜನಪ್ರಿಯ ತಾಣವಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಟ್ರಾವೆಲ್ ಕಂಪನಿಗಳು ಮತ್ತು ಪ್ರವಾಸ ನಿರ್ವಾಹಕರು ಹೇಳುತ್ತಾರೆ. ಅಬುಧಾಬಿಯ ಯಾಸ್ ಐಲ್ಯಾಂಡ್ ಮತ್ತು ಕಝಾಕಿಸ್ತಾನ್‌ನಂತಹ ಸ್ಥಳಗಳು ಭಾರತೀಯರಿಗೆ ಮುಂದಿನ ಗೋ-ಟು ತಾಣಗಳಿಗೆ ಸೇರುವ ನಿರೀಕ್ಷೆಯಿದೆ ಎಂದು ಟ್ರಾವೆಲ್ ಕಂಪನಿ ಮೇಕ್‌ಮೈಟ್ರಿಪ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಪುಲ್ ಪ್ರಕಾಶ್ ಹೇಳಿದ್ದಾರೆ.

                'ಹೊಸ ಮತ್ತು ಕಡಿಮೆ ತಿಳಿದಿರುವ ಸ್ಥಳಗಳನ್ನು ಅನ್ವೇಷಿಸಲು ನಾವು ಹೆಚ್ಚಿನ ಉತ್ಸಾಹವನ್ನು ನೋಡುತ್ತಿದ್ದೇವೆ' ಆಗ್ನೇಯ ಏಷ್ಯಾ, ಹಾಂಗ್ ಕಾಂಗ್ ಮತ್ತು ತೈವಾನ್‌ಗೆ ಭಾರತೀಯರು ರಜಾದಿನಗಳನ್ನು ಕಳೆಯಲು ತೆರಳುತ್ತಿದ್ದಾರೆ ಮನೆ ಬಾಡಿಗೆ ಪ್ರಮುಖ ಏರ್​ ಬಿಎನ್​ಬಿ ಜನರಲ್ ಮ್ಯಾನೇಜರ್ ಅಮನ್‌ಪ್ರೀತ್ ಬಜಾಜ್ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries