ನವದೆಹಲಿ: 2014ರ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು 'ಸ್ವಚ್ಚ ಭಾರತ ಅಭಿಯಾನ'ಕ್ಕೆ ಕೇಂದ್ರ ಸರ್ಕಾರ ಕರೆ ನೀಡಿತ್ತು. ಇಂದಿಗೆ ಈ ಅಭಿಯಾನ 9 ವರ್ಷ ಪೂರೈಸಿದೆ. ಇದರ ನಡುವೆಯೇ ಸಾರ್ವಜನಿಕ ಶೌಚಾಲಯಗಳ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ ಎಂಬ ಅಂಶವನ್ನು ಸಮೀಕ್ಷೆಯೊಂದು ವರದಿ ಮಾಡಿದೆ.
ನವದೆಹಲಿ: 2014ರ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು 'ಸ್ವಚ್ಚ ಭಾರತ ಅಭಿಯಾನ'ಕ್ಕೆ ಕೇಂದ್ರ ಸರ್ಕಾರ ಕರೆ ನೀಡಿತ್ತು. ಇಂದಿಗೆ ಈ ಅಭಿಯಾನ 9 ವರ್ಷ ಪೂರೈಸಿದೆ. ಇದರ ನಡುವೆಯೇ ಸಾರ್ವಜನಿಕ ಶೌಚಾಲಯಗಳ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ ಎಂಬ ಅಂಶವನ್ನು ಸಮೀಕ್ಷೆಯೊಂದು ವರದಿ ಮಾಡಿದೆ.
ಲೋಕಲ್ ಸರ್ಕಲ್ ಎಂಬ ಸಮುದಾಯ ಸಾಮಾಜಿಕ ಮಾಧ್ಯಮ ವೇದಿಕೆಯೊಂದು ಈ ಸಮೀಕ್ಷೆ ನಡೆಸಿದೆ. ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿಯನ್ನು ಕಂಡುಹಿಡಿಯುವ ಸಲುವಾಗಿ ಈ ಸಂಸ್ಥೆ ದೇಶದ 341 ಜಿಲ್ಲೆಗಳಲ್ಲಿ ಸಮೀಕ್ಷೆ ಕೈಗೊಂಡಿತ್ತು.
ಜನರು ಮನೆಯಿಂದ ಹೊರ ಬಂದಾಗ ಬಹಿರ್ದೆಸೆಗೆ ಏನು ಮಾಡುತ್ತಾರೆ, ಸಾರ್ವಜನಿಕ ಶೌಚಾಲಯಗಳು ಹೇಗೆ ಬಳಸಿಕೊಳ್ಳಲಾಗುತ್ತಿದೆ ಮತ್ತು ಅವುಗಳ ನಿರ್ವಹಣೆ ಬಗ್ಗೆ ಜನರ ಅಭಿಪ್ರಾಯವೇನು ಎಂಬುವುದರ ಕುರಿತು ಪ್ರಶ್ನೆಗಳನ್ನು ಕೇಳಿತ್ತು. ಇದರಲ್ಲಿ ಸುಮಾರು 39 ಸಾವಿರಕ್ಕೂ ಹೆಚ್ಚು ಜನ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.
ಸಮೀಕ್ಷೆ ಪ್ರಕಾರ ಶೇ.42ರಷ್ಟು ಜನರು ನಗರ ಅಥವಾ ಜಿಲ್ಲೆಗಳಲ್ಲಿ ಸಾರ್ವಜನಿಕ ಶೌಚಾಲಯಗಳ ಲಭ್ಯತೆ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರೆ, ಶೇ.52ರಷ್ಟು ಜನರು ಈ ಶೌಚಾಲಯಗಳಿದ್ದರೂ ಅವುಗಳಲ್ಲಿ ಯಾವುದೇ ಸುಧಾರಣೆಗಳಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಶೇ.35ರಷ್ಟು ಶೌಚಾಲಯಗಳ ನಿರ್ವಹಣೆ ಬಗ್ಗೆ ಸಮಾಧಾನಕರ ಅಭಿಪ್ರಾಯ ವ್ಯಕ್ತಪಡಿಸಿದರೆ, ಶೇ.25ರಷ್ಟು ಜನರು ಶೌಚಾಲಗಳ ಪರಿಸ್ಥಿತಿ ಅಷ್ಟಕಷ್ಟೆ ಎಂದಿದ್ದಾರೆ. ಶೇ.16ರಷ್ಟು ಜನರು ಚಿಂತಾಜನಕವಾಗಿದೆ ಎಂದರೆ ಶೇ.12ರಷ್ಟು ಜನರು ಬಳಸಲು ಯೋಗ್ಯವಲ್ಲ ಎಂದು ಹೇಳಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ ಪಾವತಿಸಿ ಬಳಸುವ ವ್ಯವಸ್ಥೆಯಾದರೂ ಇರಬೇಕು. ಇಲ್ಲವೇ ಸುಲಭ್ ಇಂಟರ್‌ನ್ಯಾಷನಲ್‌ನಂಥ ಸಂಸ್ಥೆಗಳಾದರೂ ಅವುಗಳನ್ನು ನಿರ್ವಹಿಸಿ ಸುಸ್ಥಿತಿಯಲ್ಲಿಡಬೇಕು. ಇಲ್ಲವಾದಲ್ಲಿ ಬೆಂಗಳೂರು, ಮುಂಬೈ, ದೆಹಲಿಯಂತ ಮಹಾನಗರಗಳಲ್ಲೂ ಸಾರ್ವಜನಿಕ ಶೌಚಾಲಯಗಳನ್ನು ಬಳಸುವುದು ಜನರಿಗೆ ಕಷ್ಟವಾಗಲಿದೆ. ಸಾರ್ವಜನಿಕ ಶೌಚಾಲಯಗಳಲ್ಲಿ ಸ್ವಚ್ಚತೆ ಕಣ್ಮರೆಯಾಗಿದ್ದು, ಹೆಚ್ಚಿನ ಜನರು ಶೌಚಕ್ಕಾಗಿ ವಾಣಿಜ್ಯ ಕಟ್ಟಡಗಳು, ಮಾಲ್‌ಗಳನ್ನು ಹುಡುಕಿಕೊಂಡು ಹೋಗುವುದು ಅನಿವಾರ್ಯವಾಗಿದೆ.
ಸಮೀಕ್ಷೆಯಲ್ಲಿ ಶೇ.69ರಷ್ಟು ಪುರುಷರು ಮತ್ತು ಶೇ.31ರಷ್ಟು ಮಹಿಳೆಯರು ಭಾಗವಹಿಸಿದ್ದರು.