HEALTH TIPS

ಗಲಭೆ ನಿಯಂತ್ರಿಸದ ನಮ್ಮ ಸರ್ಕಾರದ ವಿರುದ್ಧ ಜನಾಕ್ರೋಶ: ನಡ್ಡಾಗೆ ಮಣಿಪುರ BJP ಪತ್ರ

              ಇಂಫಾಲ್: ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರವನ್ನು ನಿಯಂತ್ರಿಸಲು ಸರ್ಕಾರಕ್ಕೆ ಇದುವರೆಗೂ ಸಾಧ್ಯವಾಗಿಲ್ಲ. ಜನರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಮಣಿಪುರ ಬಿಜೆಪಿ ಘಟಕ ಪತ್ರ ಬರೆದಿದೆ.

              ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಶಾರದಾ ದೇವಿ, ಉಪಾಧ್ಯಕ್ಷ ಚಿದಾನಂದ ಸಿಂಗ್‌ ಹಾಗೂ ಇತರ ಆರು ಮಂದಿ ಸಹಿ ಹಾಕಿರುವ ಪತ್ರದಲ್ಲಿ, 'ಸಾರ್ವಜನಿಕರ ಆಕ್ರೋಶ ಹಾಗೂ ಪ್ರತಿಭಟನೆಗಳು ಸುದೀರ್ಘ ಕ್ಷೋಭೆಯನ್ನು ನಿಯಂತ್ರಿಸಲು ವಿಫಲವಾದ ಸರ್ಕಾರದ ಕಡೆಗೆ ನಿಧಾನವಾಗಿ ತಿರುಗುತ್ತಿವೆ' ಎಂದು ಉಲ್ಲೇಖಿಸಲಾಗಿದೆ.

               ರಾಷ್ಟ್ರೀಯ ಹೆದ್ದಾರಿಗಳೂ ಸೇರಿದಂತೆ ಎಲ್ಲೆಡೆ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಹಾಗೂ ಗಲಭೆ ಪೂರ್ವ ಸ್ಥಿತಿಯನ್ನು ನಿರ್ಮಿಸುವಂತೆ ಜನರು ಒತ್ತಾಯಿಸುತ್ತಿದ್ದಾರೆ ಎಂಬುದನ್ನು ಪತ್ರದಲ್ಲಿ ಒತ್ತಿ ಹೇಳಲಾಗಿದೆ.

               ಹಿಂಸಾಚಾರದಿಂದಾಗಿ ಬೇರೆ ಕಡೆಗೆ ಸ್ಥಳಾಂತರಗೊಂಡಿರುವ ಜನರಿಗೆ ತಕ್ಷಣವೇ ಅವರವರ ನೈಜ ವಾಸಸ್ಥಳಗಳಲ್ಲಿ ಆಶ್ರಯದ ವ್ಯವಸ್ಥೆ ಮಾಡಬೇಕು. ನಮ್ಮ ಸರ್ಕಾರ ರಾಜ್ಯದಲ್ಲಿ ಸಹಜ ಸ್ಥಿತಿ ನಿರ್ಮಾಣ ಮಾಡಲು ಹಗಲು ರಾತ್ರಿ ಪ್ರಯತ್ನ ಮಾಡುತ್ತಿದೆ ಎಂಬುದು ಗೊತ್ತಿದೆ.ಅದೇರೀತಿ ಹೊಸ ಬೆಳವಣಿಗೆಗಳನ್ನು ನಿಭಾಯಿಸಲು ನಮ್ಮ ಪಕ್ಷದ ರಾಜ್ಯ ಘಟಕವೂ ಪ್ರಧಾನ ಪಾತ್ರ ವಹಿಸುತ್ತಿದೆ ಎಂದು ನಡ್ಡಾ ಅವರಿಗೆ ತಿಳಿಸಿದೆ.

              ಹಿಂಸಾಚಾರದಿಂದಾಗಿ ಮನೆಗಳನ್ನು ಕಳೆದುಕೊಂಡಿರುವವರಿಗೆ ಪರಿಹಾರ ನೀಡುವುದಾಗಿ ಮತ್ತು ತಮ್ಮವರನ್ನು ಕಳೆದುಕೊಂಡಿರುವ ಕುಟುಂಬದವರಿಗೆ ನೆರವು ಒದಗಿಸುವುದಾಗಿ ನೀಡಿರುವ ಭರವಸೆ ಪೂರೈಸಬೇಕು ಎಂದು ಆಗ್ರಹಿಸಿದೆ.

ಗಲಭೆಯಿಂದಾಗಿ ನಿಷ್ಕ್ರಿಯಗೊಂಡಿರುವ ನೆಲದ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಮತ್ತು ಹಿಂಸಾಚಾರದಲ್ಲಿ ತೊಡಗಿದರೆ ಭಯೋತ್ಪಾದನಾ ಕೃತ್ಯವೆಂದು ಪರಿಗಣಿಸಬೇಕು ಎಂದು ಬೇಡಿಕೆ ಇಟ್ಟಿದೆ.

            ಎನ್‌ಆರ್‌ಸಿ ಶೀಘ್ರ ಜಾರಿಗೆ ತರಲು ಅನುಕೂಲವಾಗುವಂತೆ ಅಕ್ರಮ ವಲಸಿಗರ ಬಯೋಮೆಟ್ರಿಕ್ ದತ್ತಾಂಶ ದಾಖಲಿಸುವ ಅಭಿಯಾನ ಶೀಘ್ರ ಪೂರ್ಣಗೊಳಿಸಲು ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಬೇಕು ಹಾಗೂ ಗಸಗಸೆ ಕೃಷಿ ಸಂಪೂರ್ಣವಾಗಿ ನಾಶಪಡಿಸಲು ಮತ್ತು ನಿರಂತರ ಕಣ್ಗಾವಲಿಗಾಗಿ ಜಂಟಿ ಮೇಲ್ವಿಚಾರಣಾ ಸಮಿತಿ ಸ್ಥಾಪಿಸುವಂತೆಯೂ ನಡ್ಡಾ ಅವರನ್ನು ಒತ್ತಾಯಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries