HEALTH TIPS

ಶಾಲಾ ಊಟದ ಯೋಜನೆ: ಸತೀಶನ್À ಮತ್ತು ಚೆನ್ನಿತ್ತಲ ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ: ಸಚಿವ ವಿ.ಶಿವನ್ ಕುಟ್ಟಿ

                  ತಿರುವನಂತಪುರಂ: ಶಾಲೆಯ ಮಧ್ಯಾಹ್ನದ ಊಟದ ಯೋಜನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಮತ್ತು ರಮೇಶ್ ಚೆನ್ನಿತ್ತಲ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಶಿಕ್ಷಣ ಸಚಿವ ವಿ.ಶಿವನ್ಕುಟ್ಟಿ ಹೇಳಿದ್ದಾರೆ.

            ಶಾಲಾ ಮಧ್ಯಾಹ್ನ ಯೋಜನೆ ವ್ಯಾಪ್ತಿಗೆ ಒಳಪಡುವ 12038 ಶಾಲೆಗಳು ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಇನ್ನೂ ಯಾವುದೇ ಬಾಕಿ ಪಾವತಿಸಿಲ್ಲ. ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಯೋಜನಾ ಅನುಷ್ಠಾನ ವೆಚ್ಚದ ಮೊತ್ತವನ್ನು ಸರ್ಕಾರವು ಶಾಲೆಗಳಿಗೆ ಸಂಪೂರ್ಣವಾಗಿ ಪಾವತಿಸಿದೆ ಎಂದು ಸಚಿವರು ತಿಳಿಸಿದರು.

              ಶಾಲೆಗಳು ಪ್ರಸಕ್ತ ತಿಂಗಳ (ಅಕ್ಟೋಬರ್) ವೆಚ್ಚಗಳಿಗೆ ಸಂಬಂಧಿಸಿದ ಬಿಲ್‍ಗಳನ್ನು ನವೆಂಬರ್ 5 ರೊಳಗೆ ಆಯಾ ಉಪಜಿಲ್ಲಾ ಕಚೇರಿಗಳಿಗೆ ಸಲ್ಲಿಸಬೇಕು. ಸದರಿ ಬಿಲ್‍ಗಳು ಮತ್ತು ಇತರ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿದ ನಂತರ ನಿಗದಿತ ಕಾಲಮಿತಿಯೊಳಗೆ ಶಾಲೆಗಳಿಗೆ ಸೂಕ್ತ ಮೊತ್ತವನ್ನು ಮಂಜೂರು ಮಾಡಲಾಗುವುದು ಎಂದು ಸಚಿವರು ಹೇಳಿದರು.

                ಶಾಲೆಗಳಿಗೆ ಮಧ್ಯಾಹ್ನದ ಊಟ ತಯಾರಿಸಲು ನಿಯೋಜನೆಗೊಂಡ ಕಾರ್ಮಿಕರಿಗೆ ಆಗಸ್ಟ್ ತಿಂಗಳವರೆಗೆ ವೇತನ ನೀಡಲಾಗಿದೆ. ಸೆಪ್ಟೆಂಬರ್ ತಿಂಗಳ ವೇತನವನ್ನು ಆದಷ್ಟು ಬೇಗ ಪಾವತಿಸಲು ಕ್ರಮಕೈಗೊಳ್ಳಲಾಗಿದೆ. ರಾಜ್ಯ ಸÀರ್ಕಾರ ಶಾಲೆಗಳು ಮುಚ್ಚಿರುವ ಬೇಸಿಗೆ ರಜೆಯಲ್ಲಿ ಅಡುಗೆ ಮಾಡುವವರಿಗೆ ಮಾಸಿಕ 2000 ರೂ., ಓಣಂ ಹಬ್ಬದ ಭತ್ಯೆಯಾಗಿ ತಿಂಗಳಿಗೆ 1,300 ರೂ.ನೀಡುತ್ತದೆ. ಕೇರಳ ಬಿಟ್ಟರೆ ಬೇರೆ ಯಾವುದೇ ರಾಜ್ಯಗಳಲ್ಲಿ ಶಾಲಾ ರಜೆಯಲ್ಲಿ ಅಡುಗೆ ಮಾಡುವವರಿಗೆ ಗೌರವಧನ  ನೀಡುವ ವ್ಯವಸ್ಥೆ ಇಲ್ಲ. ಅμÉ್ಟೀ ಅಲ್ಲ, ಅಡುಗೆ ಕೆಲಸಗಾರರಿಗೆ ಅತಿ ಹೆಚ್ಚು ಕೂಲಿ ಕೊಡುವ ರಾಜ್ಯವೂ ಕೇರಳ. ಕೇಂದ್ರ ಮತ್ತು ರಾಜ್ಯ ಕೊಡುಗೆಗಳನ್ನು ಸೇರಿಸಿ ನಂತರ ತಿಂಗಳಿಗೆ ಕೇವಲ 1000 ರೂಪಾಯಿಗಳನ್ನು ಪಾವತಿಸಲಾಗುವುದು ಎಂದು ಕೇಂದ್ರ ಮಾರ್ಗಸೂಚಿಗಳು ಷರತ್ತು ವಿಧಿಸುತ್ತವೆ. ಆದರೆ ರಾಜ್ಯ ಸರಕಾರ ಪ್ರತಿ ಕಾರ್ಮಿಕರಿಗೆ ತಿಂಗಳಿಗೆ 12000 ರಿಂದ 13500 ರೂ.ವರೆಗೆ ವೇತನ ನೀಡುತ್ತಿದೆ.

              ಶಾಲಾ ಊಟದ ಯೋಜನೆಯು ಕೇಂದ್ರೀಕೃತ ಯೋಜನೆಯಾಗಿದೆ. 60 ರಷ್ಟು ನಿರ್ವಹಣಾ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಬೇಕಾಗುತ್ತದೆ. ಆದರೆ, ರಾಜ್ಯಕ್ಕೆ ಬರಬೇಕಾದ ಕೇಂದ್ರದ ಪಾಲನ್ನು ಸಕಾಲದಲ್ಲಿ ಒದಗಿಸಿ, ಪೂರ್ಣ ಪ್ರಮಾಣದಲ್ಲಿ ಮಂಜೂರು ಮಾಡುವಲ್ಲಿ ಕೇಂದ್ರ ಸರ್ಕಾರ ಗಂಭೀರ ನಿರ್ಲಕ್ಷ್ಯ ತೋರಿದೆ. ಪ್ರಸಕ್ತ ವರ್ಷದಲ್ಲಿ ಯೋಜನೆಗೆ ಕೇಂದ್ರ ಪಾಲು ರಾಜ್ಯಕ್ಕೆ 284.31 ಕೋಟಿ ರೂ.ಮಾತ್ರ ಲಭಿಸಿದೆ. ನಿಯಮಗಳ ಪ್ರಕಾರ ಶೇ.60 ಮತ್ತು ಶೇ.40ರ ಎರಡು ಕಂತುಗಳಲ್ಲಿ ವಿತರಿಸಬೇಕು. ಇದರಂತೆ ಮೊದಲ ಕಂತಾಗಿ 170.59 ಕೋಟಿ ರೂ. ಬರಬೇಕಿದೆ. ಇಷ್ಟು ಮೊತ್ತ ಬಂದಿದ್ದರೆ ರಾಜ್ಯದ ಅನುಪಾತದ ಪಾಲು ಸೇರಿ 268.48 ಕೋಟಿ ರೂ.ಗಳನ್ನು ಶಾಲೆಗಳಿಗೆ ಮತ್ತು ಇತರರಿಗೆ ಮಂಜೂರು ಮಾಡಿ ನವೆಂಬರ್ 30ರವರೆಗೆ ಯೋಜನೆಯ ಅನುμÁ್ಠನವನ್ನು ಸುಸೂತ್ರವಾಗಿ ಮುಂದುವರಿಸಲು ಸಾಧ್ಯವಾಗುತ್ತಿತ್ತು. ಆದರೆ, ಮಂಜೂರು ಮಾಡಬೇಕಿದ್ದ 170.59 ಕೋಟಿ ರೂ. ಬದಲಾಗಿ ಕೇಂದ್ರ ಸರ್ಕಾರ ಮೊದಲ ಕಂತಾಗಿ ಕೇವಲ 54.17 ಕೋಟಿ ರೂ. ಸೆಪ್ಟೆಂಬರ್ ಅಂತ್ಯದಲ್ಲಿ ಮಂಜೂರು ಮಾಡಲಾಗಿದೆ.

               ಕೇಂದ್ರದ ಪಾಲು ರೂ.54.17 ಕೋಟಿಯಲ್ಲಿ ರಾಜ್ಯದ ಅನುಪಾತದ ಪಾಲು ರೂ.30.99 ಕೋಟಿ. ಆದರೆ, ಇದರ ಬದಲಾಗಿ ಸರ್ಕಾರ ರಾಜ್ಯದ ಪಾಲಿನ 172.14 ಕೋಟಿ ರೂ. ಇದರಿಂದ ಶಾಲೆಗಳು ಸೆಪ್ಟೆಂಬರ್ ವರೆಗಿನ ಮೊತ್ತವನ್ನು ಪಾವತಿಸಲು ಮತ್ತು ಅಡುಗೆ ಕಾರ್ಮಿಕರಿಗೆ ಆಗಸ್ಟ್ ತಿಂಗಳವರೆಗೆ ವೇತನ ನೀಡಲು ಸಾಧ್ಯವಾಯಿತು. ಕೇಂದ್ರದ ನಿರ್ಲಕ್ಷ್ಯದ ನಡುವೆಯೂ ಯಾವುದೇ ಅಡೆತಡೆಯಿಲ್ಲದೆ ಕೇಂದ್ರದಿಂದ ಆರಂಭಿಸಲಾದ ಯೋಜನೆಯನ್ನು ಮುಂದುವರಿಸಲು ರಾಜ್ಯ ಸರ್ಕಾರದ ಜಾಗರೂಕತೆ ಮತ್ತು ಪ್ರಯತ್ನಗಳನ್ನು ಸಾರ್ವಜನಿಕರು ಗುರುತಿಸುತ್ತಾರೆ ಎಂದು ಸಚಿವರು ಹೇಳಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries