ಮುಂಬೈ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮಸೀದಿಗೆ 'ಮುಹಮ್ಮದ್ ಬಿನ್ ಅಬ್ದುಲ್ಲಾ' ಎಂದು ಪ್ರವಾದಿಯವರ ಹೆಸರಿಡಲು ಇಲ್ಲಿ ನಡೆದ ಅಖಿಲ ಭಾರತ ರಾಬ್ತಾ ಇ ಮಸೀದಿ ಸಮಿತಿಯ ಸಭೆಯು ತೀರ್ಮಾನಿಸಿದೆ.
ಮುಂಬೈ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮಸೀದಿಗೆ 'ಮುಹಮ್ಮದ್ ಬಿನ್ ಅಬ್ದುಲ್ಲಾ' ಎಂದು ಪ್ರವಾದಿಯವರ ಹೆಸರಿಡಲು ಇಲ್ಲಿ ನಡೆದ ಅಖಿಲ ಭಾರತ ರಾಬ್ತಾ ಇ ಮಸೀದಿ ಸಮಿತಿಯ ಸಭೆಯು ತೀರ್ಮಾನಿಸಿದೆ.
ಮಸೀದಿಗೆ ನಾಮಕರಣ ಸಂಬಂಧ ಬಾಂದ್ರಾದಲ್ಲಿರುವ ರಂಗಶಾರದಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮುಸ್ಲಿಂ ಸಮುದಾಯದ ವಿವಿಧ ಪ್ರಮುಖರು ಪಾಲ್ಗೊಂಡಿದ್ದರು.
ಮಸೀದಿ ನಿರ್ಮಾಣದ ಸ್ಥಳದಲ್ಲಿಯೇ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಯು ಸ್ಥಾಪನೆಯಾಗಲಿದೆ. ಮಹಿಳಾ ಕಾಲೇಜು ಸ್ಥಾಪಿಸುವ ಚಿಂತನೆ ಇದೆ ಎಂದು ಸಭೆಗೆ ತಿಳಿಸಲಾಯಿತು.
ಸಭೆಯಲ್ಲಿದ್ದ ಬಿಜೆಪಿ ಮುಖಂಡ ಹಾಜಿ ಅರಾಫತ್, 'ಎಲ್ಲ ಜಾತಿ, ಧರ್ಮಗಳ ಜನರು ಮಸೀದಿ, ಆಸ್ಪತ್ರೆ ಮತ್ತು ಇತರೆ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಕೊಳ್ಳುವರು' ಎಂದು ತಿಳಿಸಿದರು.
ಬಾಬ್ರಿ ಮಸೀದಿ -ರಾಮಮಂದಿರ ವಿವಾದದಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ನೀಡಿರುವ 5 ಎಕರೆ ಭೂಮಿಯಲ್ಲಿ ಮಸೀದಿ ನಿರ್ಮಿಸಲಾಗುತ್ತಿದೆ. ನಾಲ್ಕು ಸಾವಿರ ಮಹಿಳೆಯರು ಸೇರಿ ಒಟ್ಟು 9000 ಸಾವಿರ ಮಂದಿ ಪ್ರಾರ್ಥನೆ ಸಲ್ಲಿಸಲು ಆಗುವಂತೆ ನಿರ್ಮಾಣವಾಗುತ್ತಿದೆ.
ಅಯೋಧ್ಯೆಯ ಧಾನ್ನಿಪುರ್‌ನಲ್ಲಿ ಮಸೀದಿಗಾಗಿ ಗುರುತಿಸಲಾಗಿರುವ ಭೂಮಿ, ಈ ಮೊದಲು ಬಾಬ್ರಿ ಮಸೀದಿ ಇದ್ದ ಸ್ಥಳದಿಂದ 22 ಕಿ.ಮೀ. ದೂರದಲ್ಲಿದೆ. ಬಾಬ್ರಿ ಮಸೀದಿ ಇದ್ದ ಸ್ಥಳದಲ್ಲಿ ರಾಮಮಂದಿರ ತಲೆಎತ್ತುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲಿ ಉದ್ಘಾಟನೆಯಾಗಲಿದೆ.