ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ ಕೃಷಿ ಭವನ, ತೆಂಗು ಕೃಷಿ ಕೇರಾ ಅಭಿವೃದ್ಧಿ ಗ್ರಾಮ ಸಮಿತಿ, ಮಂಜೇಶ್ವರ ಕೊಕೊನೆಟ್ ಫ್ಲವರ್ ಮಿಲ್ ಸಹಕಾರದೊಂದಿಗೆ, ಬಿ.ಎಂ ಮಚ್ಚೇಂದ್ರ ಕೊಪ್ಪಳ ಅವರ ನೇತೃತ್ವದಲ್ಲಿ ಕೊಬ್ಬರಿ ಸಂಸ್ಕರಣ ಘಟಕದ ಉದ್ಘಾಟನೆ ಇಂದು ಬೆಳಗ್ಗೆ ಬಂಗ್ರಮಂಜೇಶ್ವರ ಶ್ರೀ ಭಗವತೀ ಭಂಡಾರ ನಿಲಯದ ಮುಂಭಾಗದಲ್ಲಿ ನಡೆಯಿತು. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಘಟಕ ಉದ್ಘಾಟಿಸಿದರು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವಿನಾ ಮೊಂತೆರೋ ಅಧ್ಯಕ್ಷತೆ ವಹಿಸಿದರು.
ಮಂಜೇಶ್ವರ ಸಹಾಯಕ ಕೃಷಿ ನಿರ್ದೇಶಕಿ ಅರ್ಜಿತ ಪಿ.ವಿ ಯೋಜನೆ ಬಗ್ಗೆ ಮಾಃಇತಿ ನೀಡಿದರು. ಮಂಜೇಶ್ವರ ಗ್ರಾಮ ಪಂಚಾಯತ್ ಕ್ಷೇಮ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಯಾದವ ಬಡಾಜೆ, ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಬಿ.ವಿ ರಾಜನ್, ಕನಿಲ ಶ್ರೀ ಭಗವತೀ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ ಕುದುರು, ಕೇರ ಗ್ರಾಮ ಸಮಿತಿ ಅಧ್ಯಕ್ಷ ಪಿ.ಎಚ್ ಅಬ್ದುಲ್ ಹಮೀದ್, ಕಾರ್ಯದರ್ಶಿ ಎಸ್. ರಾಮಚಂದ್ರ, ಕೇರ ಗ್ರಾಮ ಸಮಿತಿ ಸದಸ್ಯ ಬಿ.ಎಂ ಮಚ್ಚೆಂದ್ರ ಕೊಪ್ಪಳ, ಕುಟುಂಬಶ್ರೀ ಅಧ್ಯಕ್ಷೆ ಜಯಶ್ರೀ, ಎ.ಡಿ.ಸಿ ಸದಸ್ಯ ಗಂಗಾಧರ ದುರ್ಗಿಪಳ್ಳ, ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯರಾದ ಆದರ್ಶ್ ಬಿ.ಎಂ, ಲಕ್ಷ್ಮಣ ಕುಚ್ಚಿಕ್ಕಾಡ್ ಉಪಸ್ಥೀತರಿದ್ದರು.
ಮಂಜೇಶ್ವರ ಸಹಾಯಕ ಕೃಷಿ ಅಧಿಕಾರಿ ಎ.ವಿ ರಾಧಾಕೃಷ್ಣನ್ ಸ್ವಾಗತಿಸಿದರು. ಪಾಡಶೇಕರ ಸಮಿತಿ ನೇತಾರ ಯತೀಶ ಕಾಜೂರು ವಂದಿಸಿದರು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೆರೋರವರು ತೆಂಗಿನ ಎಣ್ಣೆಯನ್ನು ಕನಿಲ ಶ್ರೀ ಭಗವತೀ ಕ್ಷೇತ್ರದ ಮಾಜಿ ಅಧ್ಯಕ್ಷ ಕೆ. ನಾರಾಯಣ ಕನಿಲರವರಿಗೆ ನೀಡುವ ಮೂಲಕ ಮೊದಲ ಮಾರಾಟಕ್ಕೆ ಚಾಲನೆ ನೀಡಿದರು.