ಉಪ್ಪಳ: ಮಹಿಳೆಯರಿಗಾಗಿ ಆರೋಗ್ಯ ಅಭಿಯಾನದ ಅಂಗವಾಗಿ ಮಂಗಲ್ಪಾಡಿ ಗ್ರಾಮ ಪಂಚಾಯತಿ ವತಿಯಿಂದ ಹೋಮಿಯೋಪತಿ ವೈದ್ಯಕೀಯ ಶಿಬಿರ ಆಯುಷ್ ಹೋಮಿಯೋ ಇಲಾಖೆ ವತಿಯಿಂದ ಸುವರ್ಣ ಮಹೋತ್ಸವ ಆಚರಣೆಗೆ ಸಂಬಂಧಿಸಿದಂತೆ ಪಂಚಾಯತಿ ಮಟ್ಟದಲ್ಲಿ ಉಪ್ಪಳ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಭಾನುವಾರ ನಡೆಯಿತು.
ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ರುಬೀನಾ ನೌಫಲ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಉಪಾಧ್ಯಕ್ಷ ಮುಹಮ್ಮದ್ ಹನೀಫ್ ಪಿ.ಕೆ, ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷÀ ಇರ್ಫಾನಾ ಇಕ್ಬಾಲ್, ಖೈರುನ್ನೀಸಾ ಉಮ್ಮರ್, ಪಂಚಾಯತಿ ಸದಸ್ಯರಾದ ಅಬ್ದುಲ್ ಮಜೀದ್, ಸುಹರಾ, ರಶೀದಾ ಹನೀಫ್, ಮಂಗಲ್ಪಾಡಿ ಹೋಮಿಮೆಡಿಕಲ್ ಅಧಿಕಾರಿ ಡಾ.ಜೆಸ್ನಾ ಹೆಚ್, ಎಪಿಎಚ್‍ಸಿ ವೈದ್ಯಾಧಿಕಾರಿ ಡಾ. ರಶ್ಮಿ ಪಿ.ಆರ್. ಉಪಸ್ಥಿತರಿದ್ದು ಮಾತನಾಡಿದರು.
ಬಳಿಕ ಡಾ.ಜೆಸ್ವಿನ್ ಮರಿಯಾ ನೇತೃತ್ವದಲ್ಲಿ ಜಾಗೃತಿ ತರಗತಿ ನಡೆಯಿತು. ಡಾ.ಜೆಸ್ನಾ.ಎಚ್, ಡಾ. ರಶ್ಮಿ ಪಿ.ಆರ್. ವೈದ್ಯಕೀಯ ಶಿಬಿರದ ನೇತೃತ್ವ ವಹಿಸಿದ್ದರು.