ಕಾಸರಗೋಡು: ಭಾರತೀಯ ಮಜ್ದೂರ್ ಸಂಘ(ಬಿಎಂಎಸ್)ಸಂಸ್ಥಾಪಕ ದತ್ತೋಪಂತ್ ಠೇಂಗಡಿ ಸಂಸ್ಮರಣಾ ಸಮಾರಂಭ ಕಾಸರಗೋಡು ಬಿಎಂಎಸ್ ಸಭಾಂಗಣದಲ್ಲಿ ಜರುಗಿತು. ಬಿಎಂಎಸ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಮದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬಿಎಂಎಸ್ ರಾಜ್ಯ ಸಮಿತಿ ಕಾರ್ಯದರ್ಶಿ ವಕೀಲ ಪಿ. ಮುರಳೀಧರನ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬಾರತೀಯ ಪರಂಪರೆಗನುಸಾರವಾಗಿ ಕಾರ್ಮಿಕರನ್ನು ಒಟ್ಟುಗೂಡಿಸಿ ಸಂಘಟನೆ ಹುಟ್ಟುಹಾಕಿದ ಶ್ರೇಯಸ್ಸು ದತ್ತೋಪಂತ್ ಠೇಂಗಡಿ ಅವರಿಗೆ ಸಲ್ಲುವುದಾಗಿ ತಿಳಿಸಿದರು. ಸಂಗಟನೆ ಜಿಲ್ಲಾ ಸಮಿತಿ ಅಧ್ಯಕ್ಷ ವಿ.ವಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಸಮಿತಿ ಪದಾಧಿಕಾರಿಗಳಾದ ಎಂ.ಕೆ ರಾಘವನ್, ಟಿ. ಕೃಷ್ಣನ್, ಶ್ರೀನಿವಾಸನ್ ಕೆ.ಎ, ವಿಶ್ವನಾಥ ಶೆಟ್ಟಿ, ಗೀತಾ ಬಾಲಕೃಷ್ಣನ್, ವಿ.ಬಿ ಸತ್ಯನಾಥನ್, ಕೆ.ವಿ ಬಾಬು, ಕೆ. ಉಪೇಂದ್ರನ್, ಸಿಂಧೂಮನೋರಾಜ್, ಪಿ. ಮುರಳೀಧರನ್, ಹರೀಶ್ ಕುದ್ರೆಪ್ಪಾಡಿ ಉಪಸ್ಥಿತರಿದ್ದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ಗೋವಿಂದನ್ ಮಡಿಕೈ ಸ್ವಾಗತಿಸಿದರು. ಜಿಲ್ಲಾ ಸಮಿತಿ ಕೋಶಾಧಿಕಾರಿ ಅನೀಶ್ ಬಿ.ನಾಯರ್ ವಂದಿಸಿದರು.