HEALTH TIPS

ದೇಶದ ವಿರುದ್ಧ ಪಿತೂರಿ: ಎರಡನೆಯ ಆರೋಪಿ ಬಂಧನ

              ವದೆಹಲಿ: ಮಣಿಪುರದಲ್ಲಿ ನಡೆಯುತ್ತಿರುವ ಸಂಘರ್ಷದ ಲಾಭ ಪಡೆದು ಭಾರತದ ವಿರುದ್ಧ ಯುದ್ಧ ಸಾರಲು ಪಿತೂರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಎರಡನೆಯ ಆರೋಪಿಯನ್ನು ಶನಿವಾರ ಬಂಧಿಸಿದೆ.

            ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಲ್ಲಿ ಇರುವ ಭಯೋತ್ಪಾದಕ ಗುಂಪುಗಳ ನಾಯಕರು ಮಣಿಪುರದಲ್ಲಿನ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿದ್ದರು ಎಂದು ಎನ್‌ಐಎ ಹೇಳಿದೆ.

               ಕಳೆದ ಒಂಬತ್ತು ದಿನಗಳ ಅವಧಿಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಬಂಧಿಸಿರುವ ಎರಡನೆಯ ವ್ಯಕ್ತಿಯ ಹೆಸರು ಸೈಮಿನ್ಲುನ್‌ ಗಂಗ್ಟೆ. ಪ್ರಕರಣವನ್ನು ಸೆಪ್ಟೆಂಬರ್ 19ರಂದು ದಾಖಲಿಸಿಕೊಳ್ಳಲಾಗಿತ್ತು ಎಂದು ಎನ್‌ಐಎ ವಕ್ತಾರರು ಹೇಳಿದ್ದಾರೆ. ಬಂಧಿತನನ್ನು ದೆಹಲಿಗೆ ಕರೆದುಕೊಂಡು ಬರಲಾಗಿದ್ದು, ಆತನನ್ನು ನ್ಯಾಯಾಧೀಶರು ಎದುರು ಹಾಜರುಪಡಿಸಲಾಗುತ್ತದೆ.

                  'ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶದಲ್ಲಿ ನೆಲೆ ಕಂಡುಕೊಂಡಿರುವ ಭಯೋತ್ಪಾದಕ ಗುಂಪುಗಳು ಭಾರತದಲ್ಲಿನ ಕೆಲವು ಉಗ್ರಗಾಮಿ ನಾಯಕರ ಜೊತೆ ಪಿತೂರಿ ನಡೆಸಿವೆ. ಭಾರತದಲ್ಲಿನ ವಿವಿಧ ಜನಸಮುದಾಯಗಳ ನಡುವೆ ದ್ವೇಷ ಮೂಡಿಸುವ ರೀತಿಯಲ್ಲಿ ಹಿಂಸಾಕೃತ್ಯಗಳನ್ನು ನಡೆಸುವುದು, ದೇಶದ ಸರ್ಕಾರದ ವಿರುದ್ಧ ಸಮರ ಸಾರುವುದು ಇವರ ಉದ್ದೇಶ ಎಂಬುದು ತನಿಖೆಯಿಂದ ಗೊತ್ತಾಗಿದೆ' ಎಂದು ಎನ್‌ಐಎ ಹೇಳಿದೆ.

             ಈ ಉದ್ದೇಶದ ಈಡೇರಿಕೆಗಾಗಿ ಈ ಗುಂಪುಗಳು ಹಣಕಾಸಿನ ನೆರವು ನೀಡುತ್ತಿದ್ದವು. ಶಸ್ತ್ರಾಸ್ತ್ರ ಮತ್ತು ಭಯೋತ್ಪಾದಕ ಕೃತ್ಯಗಳಲ್ಲಿ ಬಳಕೆಯಾಗುವ ಇತರ ಸಲಕರಣೆಗಳ ಖರೀದಿಗೆ ಈ ಹಣವನ್ನು ಬಳಸಲಾಗುತ್ತಿತ್ತು. ಮಣಿಪುರದಲ್ಲಿ ಪರಿಸ್ಥಿತಿಯನ್ನು ಹದಗೆಡಿಸುವ ಉದ್ದೇಶದಿಂದ ದೇಶದ ಈಶಾನ್ಯ ರಾಜ್ಯಗಳ ಕೆಲವು ಉಗ್ರ ಸಂಘಟನೆಗಳಿಂದ, ಗಡಿಯಾಚೆಗಿನ ಸಂಘಟನೆಗಳಿಂದ ಇವುಗಳನ್ನು ಪಡೆಯಲಾಗುತ್ತಿತ್ತು' ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.

                ಈ ಪ್ರಕರಣದಲ್ಲಿ ಮೊಯಿರಂಗಥೆಂ ಆನಂದ ಸಿಂಗ್ ಎಂಬಾತನನ್ನು ಎನ್‌ಐಎ ಸೆಪ್ಟೆಂಬರ್ 22ರಂದು ಮಣಿಪುರದಲ್ಲಿ ಬಂಧಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries