HEALTH TIPS

ಪೋಲೀಸ್ ಅಧಿಕಾರಿಯನ್ನು ಗೇಲಿ ಮಾಡಿ ಕಾರ್ಟೂನ್: ಕಲಾವಿದನ ವಿರುದ್ದ ಪ್ರಕರಣ ದಾಖಲು!

                ಇಡುಕ್ಕಿ: ಕಟ್ಟಪ್ಪನದಲ್ಲಿ ಪೋಲೀಸ್ ಅಧಿಕಾರಿಯೊಬ್ಬರ ವ್ಯಂಗ್ಯಚಿತ್ರ ಬಿಡಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ.

                   ವ್ಯಂಗ್ಯಚಿತ್ರಕಾರ ಸಾಜಿದಾಸ್ ಮೋಹನ್ ವಿರುದ್ಧ ಕಟ್ಟಪಣ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಫೇಸ್‍ಬುಕ್‍ನಲ್ಲಿ ಸಾಜಿ ಹಾಕಿದ್ದ ಕಾರ್ಟೂನ್‍ಗೆ ಅಶ್ಲೀಲ ಕಮೆಂಟ್ ಮಾಡಿದ ಐವರ ವಿರುದ್ಧವೂ ಪ್ರಕರಣವಿದೆ. ಕಟ್ಟಪ್ಪನದÀ ಟಾಮಿ ಥಾಮಸ್, ಜಿಬಿನ್ ಜೋಸೆಫ್, ಪ್ರಿನ್ಸ್ ಮ್ಯಾಥ್ಯೂ, ರಿಂಕೋ ಚಾಕೋ ಮತ್ತು ಟಾಮ್ ಜೋಸೆಫ್ ವಿರುದ್ಧ ಪ್ರಕರಣ ದಾಖಲಾಗಿದೆ. ಅಶ್ಲೀಲ ಹೇಳಿಕೆ ನೀಡಿದ ನಂತರ ಮಹಿಳೆ ಎಸ್‍ಐ ಡಿವೈಎಸ್‍ಪಿಗೆ ದೂರು ನೀಡಿದ್ದಾರೆ.

                ಇತ್ತೀಚೆಗμÉ್ಟೀ ಟ್ರಾಫಿಕ್ ಎಸ್ ಐ ಆಗಿ ಆಗಮಿಸಿದ ಅಧಿಕಾರಿ ನಗರದಲ್ಲಿ ನಿಲುಗಡೆ ಮಾಡುವ ವಾಹನಗಳು ಸೇರಿದಂತೆ ಭಾರಿ ಮೊತ್ತದ ದಂಡ ವಸೂಲಿ ಮಾಡುತ್ತಿದ್ದಾರೆ ಎಂಬ ದೂರು ಕೇಳಿಬಂದಿತ್ತು. ನಾಲ್ಕು ದಿನಗಳ ಹಿಂದೆ ಟ್ರಾಫಿಕ್ ಬ್ಲಾಕ್‍ನಲ್ಲಿ ನಿಂತಿದ್ದ ಸಾಜಿದಾಸ್ ಮೋಹನ್ ಅವರ ವಾಹನದ ಚಿತ್ರವನ್ನು ಈ ಎಸ್‍ಐ ಸೆರೆಹಿಡಿದಿದ್ದರು.  ಆ ಬಳಿಕ ದಂಡ ಹೇರಿದರೆ ಠಾಣೆ ಎದುರು ಪ್ರತಿಭಟನೆ ನಡೆಸುತ್ತೇನೆ ಎಂಬ ಬರಹದೊಂದಿಗೆ ಕಾರ್ಟೂನ್ ಬಿಡಿಸಿ ಪೋಸ್ಟ್ ಮಾಡಿದ್ದರು. 

                 ಪೋಲೀಸ್ ಜೀಪ್ ಕ್ಯಾಮೆರಾದಲ್ಲಿ ಚಿತ್ರ ತೆಗೆಯುತ್ತಿರುವ ಕಾರ್ಟೂನ್, ಬಡವರನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂಬ ಶೀರ್ಷಿಕೆಯೊಂದಿಗೆ ವ್ಯಂಗ್ಯಚಿತ್ರವಿದೆ. ಘಟನೆಯಲ್ಲಿ, ಸೈಬರ್ ಸ್ಪೇಸ್ ನಲ್ಲಿ ಮಾನನಷ್ಟ ಮತ್ತು ಮಹಿಳೆಯರನ್ನು ಅವಮಾನಿಸಿದ ಆರೋಪವನ್ನು ಆರೋಪಿಯ ಮೇಲೆ ಹೊರಿಸಲಾಗಿದೆ. ಪ್ರಕರಣದ ತನಿಖೆಯ ಹಂತದಲ್ಲಿ ವ್ಯಂಗ್ಯಚಿತ್ರಕಾರನನ್ನು ರಕ್ಷಿಸಲಾಗುವುದು ಎಂದು ಪೆÇಲೀಸರು ವಿವರಿಸಿರುವÀರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries