ಕಾಸರಗೋಡು: ಸಿಪಿಎಂ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡ ಮುಳ್ಳಂಚೇರಿಯ ಪ್ರಸಾದ್ ಚೆರಿಕಲ್ ಅವರನ್ನು ಬಿಜೆಪಿ ಞÉೀಕ್ಲಿ ಅಡ್ಕತ್ತವಯಲ್ ಬೂತ್ ಸಮಿತಿಗಳ ನೇತೃತ್ವದಲ್ಲಿ ಸ್ವಾಗತಿಸುವ ಕಾರ್ಯಕ್ರಮ ನಡೆಯಿತು.
ಬಿಜೆಪಿ ಜಿಲ್ಲಾ ಸೆಲ್ ಸಂಯೋಜಕ ಎನ್.ಬಾಬುರಾಜ್ ಸಮಾರಂಭ ಉದ್ಘಾಟಿಸಿದರು. ಉದುಮ ಪಂಚಾಯತ್ ಸಮಿತಿ ಕಾರ್ಯದರ್ಶಿ ಮಧುಸೂತನನ್ ಅಡ್ಕತ್ತವಯಲ್ ಅಧ್ಯಕ್ಷ ತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಉಮಾ ಕಡಪ್ಪುರ, ಜಿಲ್ಲಾ ಸಮಿತಿ ಸದಸ್ಯ ವೈ.ಕೃಷ್ಣದಾಸ್, ಉದುಮ ಪಂಚಾಯಿತಿ ಸಮಿತಿ ಕಾರ್ಯದರ್ಶಿ ವಿನಿಲ್ ಮುಳ್ಳಂಚೇರಿ, ಮಂಡಲ ಕಾರ್ಯದರ್ಶಿ ಶ್ಯಾಮಕಾಶಿ, ಎಂ.ಕುಞಂಬು ನಾಯರ್, ವಿಜಯನ್ ಮೈಲಾಟಿ, ಅನಿಲ್ ಙÉೀಕ್ಲಿ ಉಪಸ್ಥಿತರಿದ್ದರು.