ಬದಿಯಡ್ಕ: ಯಕ್ಷಗಾನಾಭಿಮಾನಿಗಳು ಬದಿಯಡ್ಕ ವತಿಯಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ 'ಶ್ರೀದೇವಿ ಕಾರುಣ್ಯ-ಕದಂಬ ಕೌಶಿಕೆ'ಮಳೆಗಾಲದ ಮಹೋನ್ನತ ಯಕ್ಷಗಾನ ಬಯಲಾಟ ಅ. 15ರಂದು ಮಧ್ಯಾಹ್ನ 3ರಿಂದ ಬದಿಯಡ್ಕ ಶ್ರೀಗುರುಸದನದಲ್ಲಿ ಜರುಗಲಿದೆ.
ಕಾರ್ಯಕ್ರಮದ ಅಂಗವಾಗಿ ಸಂಜೆ 6ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸುವರು. ನಿವೃತ್ತ ಪ್ರಾಧ್ಯಾಪಕ ಡಾ. ಪ್ರಸನ್ನ ರಐ, ಗೋಪಾಲಕೃಷ್ಣ ಪೈ ಬದಿಯಡ್ಕ, ನಾಟ್ಯನಿಲಯಂ ಮಂಜೇಶ್ವರದ ಬಾಲಕೃಷ್ಣ ಮಾಸ್ಟರ್, ರಾಜಗೋಪಾಲ ನವಕಾನ, ಗೋಪಾಲಕೃಷ್ಣ ವಾಂತಿಚ್ಚಾಲು, ಪ್ರಭಾವತಿ ಕೆದಿಲಾಯ ಪುಂಡೂರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭ ನಡೆಯುವ ಸನ್ಮಾನ ಸಮಾರಂಭದಲ್ಲಿ ಖ್ಯಾತ ಯಕ್ಷಗಾಣ ಕಲಾವಿದ ಲಕ್ಷ್ಮಣ ಪ್ರಭು ಕರಿಂಬಿಲ, ವಕೀಲ ಪ್ರಕಾಶ್ ಅಮ್ಮಣ್ಣಾಯ, ಡಾ. ಶ್ರೀಶ ಪಂಜಿತ್ತಡ್ಕ, ಡಾ. ರಮ್ಯಶ್ರೀ ದರ್ಬೆ ಅವರನ್ನು ಗೌರವಿಸಲಾಗುವುದು.