ಕುಂಬಳೆ: ಪ್ರತಿಷ್ಠಿತ ಪೊಳಲಿ ಯಕ್ಷೋತ್ಸವ ಸಮಾರಂಭದಲ್ಲಿ 'ಕಣಿಪುರ' ಯಕ್ಷಗಾನ ಮಾಸಪತ್ರಿಕೆ ಸಾರಥಿ, ಹಿರಿಯ ಪತ್ರಕರ್ತ, ಲೇಖಕ ಎಂ. ನಾ. ಚಂಬಲ್ತಿಮಾರ್ ಅವರಿಗೆ ಸನ್ಮಾನ ನಡೆಯಲಿದೆ. ಯಕ್ಷಕಲಾ ಪೊಳಲಿ ಇದರ 28ನೇ ವಧರ್ಂತ್ಯುತ್ಸವದ ಅಂಗವಗಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳದ ರಾಜಾಂಗಣದಲ್ಲಿ ಅ. 14ರಂದು ಜರುಗಲಿರುವ 28ನೇ ಪೆÇಳಲಿ ಯಕ್ಷೋತ್ಸವದಲ್ಲಿ ಸನ್ಮಾನ ಆಯೋಜಿಸಲಾಗಿದೆ.
ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬ ಅವರ ತವರು ನೆಲದಿಂದ ತಿಟ್ಟುಬೇಧವಿಲ್ಲದೇ ಯಕ್ಷಗಾನಕ್ಕೆ ಪ್ರೌಢ ವಿಚಾರಗಳ ಸುಸಂಸ್ಕøತ ಮಾಸಪತ್ರಿಕೆ ರೂಪಿಸಿದ್ದಲ್ಲದೇ, ಯಕ್ಷಗಾನ ರಂಗಭೂಮಿಗೆ ನೀಡಿದ ಸ್ತುತ್ಯರ್ಹ ಸೇವೆ ಪರಿಗಣಿಸಿ ಇವರನ್ನು ಪೆÇಳಲಿಯಲ್ಲಿ ಸನ್ಮಾನಿಸಲಾಗುತ್ತಿದೆ. ಕಳೆದ ಎರಡೂವರೆ ದಶಕಕ್ಕೂ ಹೆಚ್ಚು ಕಾಲದಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಅವರು ಲೇಖಕರಾಗಿ ಪ್ರಸಿದ್ದರಾಗಿರುವ ಇವರು ಕಳೆದ 13ವರ್ಷಗಳಿಂದ "ಕಣಿಪುರ" ಯಕ್ಷಗಾನ ಮಾಸಪತ್ರಿಕೆ ಯನ್ನು ಮುನ್ನಡೆಸಿಕೊಮಡು ಬರುತ್ತಿದ್ದಾರೆ.