HEALTH TIPS

ಮತ್ತೊಂದು ರೈಲು ದುರಂತ: ಹಳಿ ತಪ್ಪಿ ಕಳಚಿಕೊಂಡ ಬೋಗಿ..

               ಆಂಧ್ರಪ್ರದೇಶ: ದೇಶದಲ್ಲಿ ಮತ್ತೊಂದು ರೈಲು ದುರಂತ ಸಂಭವಿಸಿದ್ದು, ರೈಲು ಹಳಿ ತಪ್ಪಿದ್ದರಿಂದಾಗಿ ಬೋಗಿಗಳು ಕಳಚಿಕೊಂಡ ಪ್ರಕರಣ ನಡೆದಿದೆ.

                ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಈ ಅವಘಡ ಸಂಭವಿಸಿದೆ. ಅಪಘಾತಕ್ಕೊಳಗಾದ ರೈಲು ವಿಶಾಖಪಟ್ಟಣದಿಂದ ರಾಯಗಡ ಕಡೆಗೆ ಸಾಗುತ್ತಿದ್ದು, ಈ ಅವಘಡದಲ್ಲಿ ಹತ್ತಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.


              ವಿಶಾಖಪಟ್ಟಣ-ಪಾಲಸ ಪ್ಯಾಸೆಂಜರ್ ರೈಲು ಮತ್ತು ವಿಶಾಖಪಟ್ಟಣ-ರಾಯಗಡ ರೈಲುಗಳ ಹಿಂಭಾಗ ಘರ್ಷಣೆಗೆ ಒಳಗಾದ್ದರಿಂದ ಈ ಅವಘಡ ಸಂಭವಿಸಿದೆ. ಮೂರು ಬೋಗಿಗಳು ಜಖಂಗೊಂಡಿವೆ.

                ಎನ್​ಡಿಆರ್​​ಎಫ್​ ಮತ್ತು ಸ್ಥಳೀಯಾಡಳಿತ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಆಯಕ್ಸಿಡೆಂಟ್ ರಿಲೀಫ್ ಟ್ರೇನ್​ಗಳು ಸ್ಥಳಕ್ಕೆ ಧಾವಿಸಿದ್ದು, ಸೂಕ್ತ ಕ್ರಮ ಜರುಗಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries